ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಾಗಾರ

0

ನಡ : ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023-ವಿಶೇಷ ಕಾರ್ಯಗಾರ ಕರಡು ಮತದಾರರ ಪಟ್ಟಿಯ ಪರಿಷ್ಕರಣೆ ಹಿನ್ನೆಲೆಯಲ್ಲಿ, ವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.09 ರಂದು ಕಾಲೇಜು ವತಿಯಿಂದ ನಡ ಮುಖ್ಯ ರಸ್ತೆಯಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಯಿತು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ, ಪರಿಶೀಲಿಸುವ ಬಗ್ಗೆ ಸಂದೇಶ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಅಂತೆಯೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗ್ಗೆ ವಿವಿಧ ಘೋಷಣೆ ಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಚಂದ್ರಶೇಖರ್ ರವರ ನೇತೃತ್ವದಲ್ಲಿ, ರೆಡ್ ಕ್ರಾಸ್ ಘಟಕ ಸಂಯೋಜಕ ಉಪನ್ಯಾಸಕ ಮೋಹನ ಗೌಡ ಕಾರ್ಯಾಗಾರವನ್ನು ಸಂಯೋಜಿಸಿದರು. ಉಪನ್ಯಾಸಕರುಗಳಾದ ಶ್ರೀಮತಿ ಲಿಲ್ಲಿ ಪಿ. ವಿ., ವಸಂತಿ ಪಿ., ಶ್ರೀಮತಿ ಸುಕೇತ, ಶ್ರೀಮತಿ ವಿದ್ಯಾ ಸಹಕರಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here