ನಾಳ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ ಪ್ರಯುಕ್ತ ಪೂರ್ವಭಾವಿ ಸಭೆ

0

ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಭಾವಿ  ಸಭೆ ನ.20 ರಂದು ಅನ್ನ ಪೂರ್ಣ ಛತ್ರದ ಸಭಾಂಗಣದಲ್ಲಿ ಜರಗಿತು.

ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಜಾತ್ರಾ ಮಹೋತ್ಸವ ಯಶಸ್ಸಿಗೆ ಭಕ್ತಾಧಿಗಳ ಸಹಕಾರವನ್ನು ಯಾಚಿಸಿದರು. ವಾರ್ಷಿಕವಾಗಿ ನಡೆಯುವ ಜಾತ್ರೆ ಮಹೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರುವ ಬಗ್ಗೆ ಭಕ್ತಾದಿಗಳಿಂದ ಉತ್ತಮ ರೀತಿಯಲ್ಲಿ ಚರ್ಚೆ ನಡೆಯಿತು.

ವೈದಿಕ,ವಿಧಿ- ವಿಧಾನ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶಿಷ್ಟ ರೀತಿಯಲ್ಲಿ ನಡೆಸುವ ಮೂಲಕ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಹಾಗೂ
ವಿವಿಧ ಸಮಿತಿ ಪದಾಧಿಕಾರಿಗಳ ಆಯ್ಕೆ ಸರ್ವಾನುಮತದಿಂದ ನಡೆಯಿತು.
ನಾಳ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ|ಮೂ| ರಾಘವೇಂದ್ರ ಅಸ್ರಣ್ಣ, ವ್ಯವಸ್ಥಾಪನ ಸಮಿತಿ ನಿಕಟ ಪೂರ್ವ ಅಧ್ಯಕ್ಷ, ಪ್ರಸ್ತುತ ಸದಸ್ಯರಾದ ವಸಂತ ಮಜಲು, ಸದಸ್ಯರಾದ ದಿನೇಶ ಗೌಡ ಕಲಾಯಿತೋಟು, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ ಭಜನ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ದೇವಸ್ಥಾನ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಗೇರುಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದ ವಿವಿಧ ಸಮಿತಿ ಸದಸ್ಯರು, ಭಜನಾ ಮಂಡಳಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here