ನ್ಯಾಯತರ್ಪು: ಯುವ ಕೃಷಿಕ ವಿಜಯ ಗೌಡ ಆತ್ಮಹತ್ಯೆ

0

ನ್ಯಾಯತರ್ಪು : ಇಲ್ಲಿಯ ಹಾಕೋಟೆ ಬರೆಮೇಲು ಮನೆ ನಿವಾಸಿ ವಿಜಯ ಗೌಡ (37 ವರ್ಷ) ಮನೆಯ ಪಕ್ಕದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ.17 ರಂದು ನಡೆಯಿತು.
ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ತಡವಾಗಿ ಮನೆಯವರ ಗಮನಕ್ಕೆ ಬಂದಿತು.ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ನ.20 ರಂದು ನಿಧನರಾದರು.
ಮೃತರು ಅವಿವಾಹಿತ ಹಾಗೂ ಉತ್ತಮ ಕೃಷಿಕರಾಗಿದ್ದರು.ಸ್ಥಳೀಯರ ಕೃಷಿ ಜಮೀನುಗಳಲ್ಲಿ ವಿವಿಧ ಬಗೆಯ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದರು.ಯಾವುದೇ ದುಶ್ಚಟಗಳಿಲ್ಲದೇ ಜೀವನ ನಡೆಸುತ್ತಿದ್ದರು.ಕಳೆದ 5 -6 ವರ್ಷಗಳ ಹಿಂದೆ ಕೃಷಿಯಲ್ಲಿ ನಿರತರಾಗಿದ್ದಾಗ ಕಾಲಿಗೆ ಬಲವಾದ ಗಾಯವಾಗಿದ್ದ ಸಂದರ್ಭದಲ್ಲಿ ಕಾಲಿನ ಭಾಗವನ್ನು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇತ್ತೀಚಿಗೆ ಮತ್ತೆ ಕಾಲು ನೋವು ಉಲ್ಬಣಗೊಂಡು ತೊಂದರೆ ಅನುಭವಿಸುತ್ತಿದ್ದರು.ಹಾಗೂ ತರಕಾರಿ ಕೃಷಿಯಲ್ಲಿಯೂ ನಷ್ಟ ಅನುಭವಿಸಿ,ಸಾಲಭಾಧೆಯಿಂದ ಕೆಂಗಟ್ಟಿ ಆತ್ಮಹತ್ಯೆ ಮಾಡಿಕೊಂಡರು ಎಂದು ಮನೆಯವರು ಹಾಗೂ ಸ್ಥಳೀಯರು ಹೇಳಿ ಕೊಳ್ಳುತ್ತಿದ್ದಾರೆ. ಮೃತರು ತಂದೆ, ತಾಯಿ, ಮೂವರು ಸಹೋದರರು ಹಾಗೂ 2 ಸಹೋದರಿಯನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here