ಕೆ.ಪಿ.ಎಸ್ ಪುಂಜಾಲಕಟ್ಟೆ ಇಲ್ಲಿಯ ಪದವಿ ಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ: ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಯ ಬೆನ್ನುಲುಬು – ಸಿ.ಡಿ. ಜಯಣ್ಣ

0

ಪುಂಜಾಲಕಟ್ಟೆ: ಕೆ.ಪಿ.ಎಸ್ ಪುಂಜಾಲಕಟ್ಟೆ ಇಲ್ಲಿಯ ಪದವಿ ಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವವು ನ.21 ರಂದು ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಗಂಗಾಧರ ಆಳ್ವ  ಮಾತನಾಡಿ ಪ್ರಯತ್ನ ಶೀಲ ಮನಸ್ಸುಗಳಿಗೆ ಅವಕಾಶದ ಹೆಬ್ಬಾಗಿಲು ಸದಾ ತೆರೆದಿರುತ್ತದೆ. ಗುರಿ ಮತ್ತು ಪ್ರಯತ್ನ ಜೊತೆಯಾದಾಗ ಅದ್ಭುತವನ್ನು ಸಾಧಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಡಿ. ಜಯಣ್ಣ ವಹಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಯ ಬೆನ್ನುಲುಬು ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ| ಸರೋಜಿನಿ ಆಚಾರ್ ಪ್ರಸ್ತಾವಿಕ ನುಡಿಗಳೊಂದಿಗೆ ವಾರ್ಷಿಕ ವರದಿ ವಾಚಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ಣು ಇಲ್ಲಿಯ ಪ್ರಾಂಶುಪಾಲರಾದ ವಿಷ್ಣುಮೂರ್ತಿ ಮಯ್ಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಪದವಿ ಪೂರ್ವ ಹಂತ ಬಹಳ ಮುಖ್ಯ ಎಂದು ಹೇಳಿದರು.

ಇತಿಹಾಸ ಉಪನ್ಯಾಸಕಿ  ಅನ್ನಪೂರ್ಣ.ಪಿ  ಮತ್ತು ಸಮಾಜಶಾಸ್ತ್ರ ಉಪನ್ಯಾಸಕಿ   ತುಳಸಿ  ಕಾರ್‍ಯಕ್ರಮವನ್ನು ನಿರೂಪಿಸಿದರು. ಡಾ| ವಾಸಂತಿ ಎಂ ಕೆ ಅರ್ಥಶಾಸ್ತ್ರ ಉಪನ್ಯಾಸಕರು,  ಶ್ವೇತಾ ಗಣಿತಶಾಸ್ತ್ರ ಉಪನ್ಯಾಸಕರು, ಸಂದೀಪ್ ರಾಜ್ಯಶಾಸ್ತ್ರ ಉಪನ್ಯಾಸಕರು, ಕು|ಗೀತಾ ಭೌತಶಾಸ್ತ್ರ ಉಪನ್ಯಾಸಕರು ದತ್ತಿ, ಕಲಿಕಾ ಮತ್ತು ಕ್ರೀಡಾ ಬಹುಮಾನಗಳ ಪಟ್ಟಿ ವಾಚಿಸಿದರು. ವಿನುತಾ ರಸಾಯನಶಾಸ್ತ್ರ ಉಪನ್ಯಾಸಕರು ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ನಾಗಶ್ರೀ ವಂದಿಸಿದರು.

 

 

 

 

 

 

LEAVE A REPLY

Please enter your comment!
Please enter your name here