ಮೈರೋಳ್ತಡ್ಕ : ನವಜೀವನ ಸಮಿತಿ ಸದಸ್ಯ ನೋಣಯ್ಯ ಪೂಜಾರಿಯವರ ಮನೆಯಲ್ಲಿ ಕಾಣಿಸಿಕೊಂಡ ನಾಗರ ಹಾವು

0

ಮೈರೋಳ್ತಡ್ಕ :ಬಂದಾರು ಗ್ರಾಮದ ಮೈರೋಳ್ತಡ್ಕ ನವಜೀವನ ಸಮಿತಿ ಸದಸ್ಯರಾದ ನೋಣಯ್ಯ ಪೂಜಾರಿ ಬೊಲೋಡಿ ಇವರ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ ಮನೆಯವರು ಗಾಭರಿಗೊಂಡಿದ್ದರು. ಜನಜಾಗೃತಿ ಕಣಿಯೂರು ವಲಯಾಧ್ಯಕ್ಷರಾದ ರುಕ್ಮಯ್ಯ ಪೂಜಾರಿ ಇವರಿಗೆ ವಿಷಯ ತಿಳಿಸಿ ಅವರು ತಕ್ಷಣ ಕಾರ್ಯಪ್ರವೃತರಾಗಿ ದೂರವಾಣಿ ಮೂಲಕ ಕಣಿಯೂರು ಘಟಕ ವಿಪತ್ತು ನಿರ್ವಹಣಾ ಸದಸ್ಯರಾದ ದಿನೇಶ್ ಗೌಡ ಖಂಡಿಗ ಇವರಿಗೆ ತಿಳಿಸಿದರು.ಕೂಡಲೇ ಸ್ನೇಕ್ ಅಶೋಕ್ ಜೊತೆ ಸಂಪರ್ಕ ಮಾಡಿ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು.

ಈ ಸಂಧರ್ಭದಲ್ಲಿ ಘಟಕ ಪ್ರತಿನಿಧಿ ಗಿರೀಶ್ ಬಿ.ಕೆ ಮೈರೋಳ್ತಡ್ಕ, ಸ್ವಯಂಸೇವಕರಾದ ಪ್ರಶಾಂತ್ ನಿರುಂಬುಡ ಹಾಗೂ ಸ್ಥಳಿಯರಾದ ಸಚಿನ್ ಮೊಗ್ರು ಸಮಯೋಚಿತವಾಗಿ ಸಹಕರಿಸಿದರು.

 

 

LEAVE A REPLY

Please enter your comment!
Please enter your name here