ಬೆಳ್ತಂಗಡಿ: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಸೆರೆಹಿಡಿದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ: ಹಲವು ವರುಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಸೆರೆಹಿಡಿದು ನ್ಯಾಯಾಲಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಹಾಜರುಪಡಿಸಿದ್ದಾರೆ.

ಬೆಳ್ತಂಗಡಿ ಠಾಣಾ ಅಕ್ರ 21/2014 ಕಲಂ: 454, 380 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಬೆಂಗಳೂರು ನಿವಾಸಿ ಮಣಿ ಯಾನೆ ಮಣಿಕಂಠ ಎಂಬಾತನನ್ನು  ಬೆಂಗಳೂರು ಶಿವಪ್ಪನ ತೋಟ, ಮಾರಮ್ಮನ ದೇವಸ್ಥಾನದ ಬಳಿ ಬಾಗಲಕುಂಟೆ ಎಂಬಲ್ಲಿಂದ ಬೆಳ್ತಂಗಡಿ ಠಾಣಾ ವೃಷಭ ಮತ್ತು  ಚರಣ್ ರಾಜ್ ರವರು ಪತ್ತೆಹಚ್ಚಿ ಬೆಳ್ತಂಗಡಿ ಪ್ರಧಾನ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

LEAVE A REPLY

Please enter your comment!
Please enter your name here