ಬಳ್ಳಮಂಜ ಮಹತೋಬಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಶೇಷ ನಾಗ ಜೋಡುಕರೆ ಕಂಬಳ ಸಮಿತಿ ಕೊಡುಗೆ ರಥಾಲಯದ ಉದ್ಘಾಟನೆ

0

ಮಚ್ಚಿನ : ಇತಿಹಾಸ ಪ್ರಸಿದ್ಧ ಮಹತೋಬಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ದೇವಳಗದ್ದೆಯಲ್ಲಿ ಡಿ.18ರಂದು ಜರಗುವ ಶೇಷ ನಾಗ ಜೋಡುಕರೆ ಕಂಬಳ ಸಮಿತಿಯ ಬೆಳ್ಳಿ ಹಬ್ಬದ ಸವಿ ನೆನಪಿಗೆ ನೂತನವಾಗಿ ನಿರ್ಮಿಸಿದ ರಥಾಲಯದ ಉದ್ಘಾಟನೆ ಶಾಸಕ ಹರೀಶ್ ಪೂಂಜ ನ.28ರಿಂದ ನ.30ರ ವರೆಗೆ ನಡೆಯುವ ಷಷ್ಠಿ ಮಹೋತ್ಸವದ ಪಂಚಮಿ ದಿನ ದಂದು ನ.28ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿ, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಡಾ. ಎಂ ಹರ್ಷ ಸಂಪಿಗೆತ್ತಾಯಾ, ಕಂಬಳ ಸಮಿತಿ ಅಧ್ಯಕ್ಷ ಪದ್ಮನಾಭ ಸುವರ್ಣ, ಗೌರವಾಧ್ಯಕ್ಷರು ಸುದೀರ್ ಶೆಟ್ಟಿ ಕೊರಬೆಟ್ಟು, ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ಕಾರ್ಯದರ್ಶಿ ವಸಂತ ಮರಕಡ, ಜೊತೆ ಕಾರ್ಯದರ್ಶಿ ಅವಿನಾಶ್ ಕುಲಾಲ್, ನಾರಾಯಣ ಪೂಜಾರಿ ಹೊಸಮನೆ, ಶಾಮ್ ಪ್ರಸಾದ್ ಸಂಪಿಗೆತ್ತಾಯಾ, ಎಂ ಅಶೋಕ್ ಕುಮಾರ್ ಸಂಪಿಗೆತ್ತಾಯ, ಕಂಬಳ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here