HomePage_Banner
HomePage_Banner

ಪಡುಬೆಟ್ಟು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಿವಪ್ರಸಾದ್ ಬೀದಿಮಜಲು ಆಯ್ಕೆ


ನೆಲ್ಯಾಡಿ: ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಿವಪ್ರಸಾದ್ ಬೀದಿಮಜಲು ಹಾಗೂ ಉಪಾಧ್ಯಕ್ಷೆಯಾಗಿ ಜಲಜಾಕ್ಷಿ ಪಡುಬೆಟ್ಟು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರ ಅಧ್ಯಕ್ಷತೆಯಲ್ಲಿ ಜೂ. 17ರಂದು ನಡೆದ ಎಸ್‌ಡಿಎಂಸಿ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸದಸ್ಯರುಗಳಾದ ಅಣ್ಣಿ ಎಲ್ತಿಮಾರ್, ಗಿರೀಶ್ ಶೆಟ್ಟಿಬೀದಿಮನೆ, ಜನಾರ್ದನ ಗೌಡ ಗಡಿಕಲ್ಲು, ಚಂದ್ರಹಾಸ ಬಲ್ಯ, ಬೇಬಿ ಸಂಪಿಗೆದಡಿ, ಮಹಮ್ಮದ್ ಶರೀಫ್ ತಾಜ್, ವಿಶ್ವನಾಥ ಗೌಡ ಕಲ್ಲೇರಿ, ಸೇಸಪ್ಪ ಗೌಡ ಪಡಿಪಂಡ, ಜಯಂತಿ ಪಡಿಪಂಡ, ಭವಾನಿ ಗಾಣಂತಿ, ಸುನೀತಾಬೀದಿಶಾಲೆ, ಗೀತಾ, ಪ್ರಸಾದ್, ಶಮೀರ್ ಪಟ್ಟೆ ಸಭೆಯಲ್ಲಿ ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ, ರಾಜ್ಯ ಸಮಿತಿ ಸದಸ್ಯರೂ ಆದ ಇಸ್ಮಾಯಿಲ್ ಮೊರಂಕಳರವರು ಎಸ್‌ಡಿಎಂಸಿ ರಚನೆ ಕುರಿತಂತೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಅನ್ನಮ್ಮ ಸಿ.ಜೆ ಸ್ವಾಗತಿಸಿ, ದೈ. ಶಿ ಶಿಕ್ಷಕಿ ಲೀಲಾವತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.