ಸೌತಡ್ಕ ನೂತನ ಬಸ್ ತಂಗುದಾಣ ಉದ್ಘಾಟನೆ

0

ಕೊಕ್ಕಡ : ಸೌತಡ್ಕದಲ್ಲಿರುವ ನೈಮಿಷ ಮಸಾಲೆಗಳ ಮನೆ ಇದರ ಮಾಲಕರಾದ ಬಾಲಕೃಷ್ಣ ನೈಮಿಷರವರ ಪತ್ನಿ ಪಣಂಬೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ರಾಸಾಯನಶಾಸ್ತ್ರದ ಉಪನ್ಯಾಸಕರಾದ ರಿಂಕಾ ಬಾಲಕೃಷ್ಣರವರ ಹುಟ್ಟುಹಬ್ಬದ ಪ್ರಯುಕ್ತ ಸೌತಡ್ಕ ಬಳಿ ನಿರ್ಮಿಸಿದ ನೂತನ ಬಸ್ ತಂಗುದಾಣವನ್ನು ರಿಂಕಾ ಬಾಲಕೃಷ್ಣರವರು ನ. 29ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಾಲಕೃಷ್ಣ ನೈಮಿಷ, ಮಾ. ವಿಖ್ಯಾತ್, ಶ್ರೀಮತಿ ಕಮಲಾ ಪುಟ್ಟಪ್ಪ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾ. ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ಉಪಾಧ್ಯಕ್ಷೆ ಪವಿತ್ರ ಗುರುರಾಜ್, ಸದಸ್ಯರಾದ ಬೇಬಿ, ಪ್ರಭಾಕರ್, ಗಣೇಶ್ ಕಲಾಯಿ, ಪ್ರಶಾಂತ್ ಹಾಗೂ ನೈಮಿಷ ಕುಟುಂಬದ ಎಲ್ಲಾ ಸಹೋದ್ಯೋಗಿಗಳು ಸೌತಡ್ಕ ಹಾಗೂ ಶಬರಾಡಿ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here