ಮಾಸ್ಟರ್ಸ್ ಅತ್ಲೆಟಿಕ್: ಆಶಾಲತಾ, ರೇಖಾಯುವರಾಜ್, ಭಾಸ್ಕರ‌ ಗೌಡ ರಾಜ್ಯಮಟ್ಟಕ್ಕೆ

0

ಪುತ್ತೂರು: ದ.ಕ.ಮಾಸ್ಟರ್ಸ್ ಅತ್ಲೆಟಿಕ್ಸ್ ಅಸೋಶಿಯೇಶನ್ ಮಂಗಳೂರು ಇದರ ವತಿಯಿಂದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 17ನೇ ಜಿಲ್ಲಾ ಮಟ್ಟದ  ಮಾಸ್ಟರ್ಸ್ ಅತ್ಲೆಟಿಕ್ ಚಾಂಪಿಯನ್‌ಶಿಪ್‌ನ 40ರ ವಯೋಮಾನದ ಕ್ರೀಡಾಕೂಟದಲ್ಲಿ ಆಶಾಲತ, 30ರ ವಯೋಮಾನದ ಕ್ರೀಡಾಕೂಟದಲ್ಲಿ ರೇಖಾ ಯುವರಾಜ್ ಹಾಗೂ 35ರ ವಯೋಮಾನದ ಕ್ರಿಡಾಕೂಟದಲ್ಲಿ ಭಾಸ್ಕರ ಗೌಡ ಮಾಲ ಮನೆರವರು ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಆಶಾಲತ(ಕೊಣಾಜೆ ಬೇಂಗತ್ತಡ್ಕ ದಯಾನಂದರವರ ಪತ್ನಿ)ರವರು 1500ಮೀ. ಪ್ರಥಮ, 3000ಮೀ. ದ್ವಿತೀಯ, 3000ಮೀ. ನಡಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೇಖಾ ಯುವರಾಜ್(ಕೊಣಾಜೆ ಅಲಾಡಿ ನಿವಾಸಿ)1500ಮೀ. ಪ್ರಥಮ, 3000ಮೀ. ಪ್ರಥಮ, 3000ಮೀ. ನಡಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾಸ್ಕರ ಮಾಲ(ಕೋಣಾಜೆ ನಿವಾಸಿ)ರವರು 1500ಮೀ. ಪ್ರಥಮ, 5000ಮೀ. ಪ್ರಥಮ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here