ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡೋತ್ಸವ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಶಾಲಾ ಕ್ರೀಡೋತ್ಸವವನ್ನು ನ. 29ರಂದು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ರೊಸಾರಿಯೋ ಕಾಲೇಜಿನ ಪ್ರಾಂಶುಪಾಲರು ಹಾಗೂ ನೈನಾಡು ಚರ್ಚ್ ನ ಧರ್ಮಗುರುಗಳಾದ ಫಾ. ರೋಖಿ ಫೆರ್ನಾಂಡಿಸ್ ರವರು ಆಟಗಳು ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತವೆ ಎಂದು ನುಡಿದು ಶುಭಹಾರೈಸಿದರು. ಶಾಲಾ ಸಂಚಾಲಕರಾದ ಅತಿ ವಂದನೀಯ ಫಾ. ಜೋಸೆಫ್ ಕಾರ್ಡೋಜರವರು ಕ್ರೀಡೋತ್ಸವಕ್ಕೆ ಶುಭ ಹಾರೈಸಿ, ಆಶೀರ್ವದಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಆಟಗಳು ಮಕ್ಕಳಲ್ಲಿ ಕ್ರೀಡಾ ಮನೋಭಾವ, ಕ್ರೀಡಾ ಸ್ಪೂರ್ತಿಯನ್ನು ತುಂಬುತ್ತವೆ. ಉತ್ಸಾಹದಿಂದ ಆಟಗಳನ್ನು ಆಡಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ನುಡಿದು ಶುಭ ಹಾರೈಸಿದರು.

ಜಿಲ್ಲಾ ಮಟ್ಟದಲ್ಲಿ ಸಾಧನೆಯನ್ನು ತೋರಿದ ಆಟಗಾರರು ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಕ್ರೀಡಾ ಮಂತ್ರಿ ವಿಲ್ಸನ್ ಡಿಸೋಜ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಾಲಾ ವಾದ್ಯ ತಂಡದವರು ಕವಾಯತ್ತನ್ನು ಪ್ರದರ್ಶಿಸಿದರು. ಶಾಲಾ ವಿವಿಧ ತಂಡಗಳ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಫಲಕವನ್ನು ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಸೇವಕ ಜೋಯೆಲ್ ಪ್ರೀತಮ್ ರೇಗೋ, ಚರ್ಚ್ ನ 21ಆಯೋಗಗಳ ಸಂಯೋಜಕರಾದ ಶ್ರೀ ವಿನ್ಸೆಂಟ್ ಡಿಸೋಜ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೇಗೋ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ಬೊನವೆಂಚರ್ ಪಿಂಟೋ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶರತ್ ಸಂತೋಷ್ ಪಿಂಟೋ  ಕಾರ್ಯಕ್ರಮವನ್ನು ಆಯೋಜಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ರೆನಿಟಾ ಲಸ್ರಾದೊ ಸ್ವಾಗತಿಸಿ, ಶ್ರೀಮತಿ ಸರಿತಾ ರೋಡ್ರಿಗಸ್ ವಂದಿಸಿದರು. ಶ್ರೀಮತಿ ಮೇರಿ ಸುಜಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here