ಪಾಲೆಪ್ಪಾಡಿ 30 ನೇ ವರ್ಷದ ಗಣೇಶೋತ್ಸವ

0

 

ವಿಜೃಂಭಣೆಯಿಂದ ನಡೆದ ಶೋಭಾಯಾತ್ರೆ

ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ 30 ನೇ ವರ್ಷದ ಶ್ರೀ ಗಣೇಶ ಚತುರ್ಥಿ ಆಚರಣೆಯು ಆ.31 ರಂದು ಮಂಜುಶ್ರೀ ಕ್ರೀಡಾಂಗಣ ದರ್ಖಾಸ್ತು ಪಾಲೆಪ್ಪಾಡಿಯಲ್ಲಿ ನಡೆಯಿತು.
ಬೆಳಿಗ್ಗೆ ಶ್ರೀ ಗಣಪತಿ ಹವನ ಹಾಗೂ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಎಸ್.ಎಸ್.ಎಲ್.ಸಿಯಲ್ಲಿ 2021-22 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪವನ್ ಕೋಡ್ತೀಲು ರವರನ್ನು ಗೌರವಿಸಲಾಯಿತು.
ಸಂಜೆ ಶ್ರೀ ಗಣೇಶನ ವಿಜೃಂಭಣೆಯ ಶೋಭಾಯಾತ್ರೆ ನಡೆದು ಪಾಲೆಪ್ಪಾಡಿ ಕುವೆತ್ತೋಡು ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.


ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ರಾವ್ ಉದ್ದಂಪಾಡಿ,ಅಧ್ಯಕ್ಷ ಸುಂದರಲಿಂಗಂ, ಕಾರ್ಯದರ್ಶಿ ಜಯಪ್ರಸಾದ್ ಕಜೆತ್ತಡ್ಕ, ಮಂಜುಶ್ರೀ ಗೆಳೆಯರ ಬಳಗದ ಗೌರವಾಧ್ಯಕ್ಷ ನಾರಾಯಣ ಉದ್ದಂಪಾಡಿ, ಅಧ್ಯಕ್ಷ ನಟರಾಜ ಸಿ.ಕೂಪ್, ಕಾರ್ಯದರ್ಶಿ ಅನ್ವಿತ್ ಕಣಿಲೆಗುಂಡಿ ಹಾಗೂ ಗಣೇಶೋತ್ಸವ ಸಮಿತಿ ಮತ್ತು ಮಂಜುಶ್ರೀ ಗೆಳೆಯರ ಬಳಗದ ಎಲ್ಲಾ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here