ಸೆ.09 : ಐವರ್ನಾಡು ಜೂನಿಯರ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಖೋ‌ ಖೋ ಪಂದ್ಯಾಟ

0

 

ಪಂದ್ಯಾಟಕ್ಕೆ ನಡೆಯುತ್ತಿದೆ ಭರದ ಸಿದ್ಧತೆ

ಐವರ್ನಾಡು ಜೂನಿಯರ್ ಕಾಲೇಜಿನಲ್ಲಿ ಸೆ.09 ಕ್ಕೆ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ನಡೆಯಲಿದ್ದು ಪಂದ್ಯಾಟಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ.
ಏಳು ತಾಲೂಕಿನ ಶಾಲೆಯ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದು ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
14 ವರ್ಷ ವಯೋಮಾನದ ವಿದ್ಯಾರ್ಥಿಗಳ 14 ಟೀಮ್ ಮತ್ತು 17 ವರ್ಷ ವಯೋಮಾನ 14 ಟೀಮ್ ಗಳಿಗೆ ಪಂದ್ಯಾಟ ನಡೆಯಲಿದೆ.
ಪಂದ್ಯಾಟಕ್ಕಾಗಿ ಶಾಲೆಯ ಮೈದಾನದಲ್ಲಿ ಭರದ ಸಿದ್ದತೆಗಳು ನಡೆಯುತ್ತಿದೆ.
ಜೂನಿಯರ್ ವಿಭಾಗದ ಪಂದ್ಯಾಟಕ್ಕೆ 2 ಕೋರ್ಟ್ ಮತ್ತು ಸೀನಿಯರ್ ವಿಭಾಗದ ಪಂದ್ಯಾಟಕ್ಕೆ 2 ಕೋರ್ಟ್ ಗಳನ್ನು ಸಿದ್ಧಗೊಳಿಸಲಾಗಿದೆ.
ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಾಹಾರ ಮದ್ಯಾಹ್ನ ಊಟದ ವ್ಯವಸ್ಥೆ ಹಾಗೂ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗುವುದು ಎಂದು ಶಾಲಾ ಮುಖ್ಯೋಪಾಧ್ಯಾಯ ರಾದ ಸೂಫಿ ಪೆರಾಜೆ, ಸಮಿತಿಯ ಎಸ್.ಎನ್.ಮನ್ಮಥ ಹಾಗೂ ಶಾಲಾ ಶಿಕ್ಷಕ ನಾರಾಯಣರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here