ಸಂಪಾಜೆ : ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

0

ಸಂಪಾಜೆ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ, ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಹಾಗೂ ತೀರ್ಪುಗಾರರು ಒಳ್ಳೆಯ ತೀರ್ಪು ನೀಡುವುದರ ಜೊತೆಯಲ್ಲಿ ಕ್ರೀಡಾಕೂಟ ಯಶಸ್ವಿಗೊಳಿಸಲು ಕರೆ ನೀಡಿದರು.

ಕೊಂದಲಕಾಡು ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಮಾತನಾಡಿ, ತೀರ್ಪುಗಾರರು ಸರಿಯಾದ ತೀರ್ಪು ನೀಡಿ ನಿಜವಾದ ಸ್ಪರ್ಧಾಳು ಗೆ ಅನ್ಯಾಯ ಆಗಬಾರದು ಎಂದು ಹೇಳಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರುಗಳಾದ ಸುಂದರಿ ಮುಂಡಡ್ಕ, ಜಗದೀಶ್ ರೈ, ಎಸ್. ಕೆ. ಹನೀಫ್, ವಿಜಯ್ ಕುಮಾರ್,ಮಾಜಿ ಅಧ್ಯಕ್ಷರಾದ ಯಮುನಾ ಬಿ. ಎಸ್. ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಹೊನ್ನಪ ಆಚಾರ್ಯ, ಶಾಲಾ ಶಿಕ್ಷಕರು ದೈಹಿಕ ಪರಿವಿಕ್ಷಕ ಸೂಫಿ ಪೆರಾಜೆ, ಹಾಗೂ ವಿವಿಧ ಶಾಲಾ ಅಧ್ಯಾಪಕರು, ಸುಮಾರು ೨೩ ಶಾಲೆಯ ಸ್ಪರ್ಧಾಳುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here