ಅರಂತೋಡು ಎನ್ ಎಂ ಪಿ ಯು ಹೈಸ್ಕೂಲ್ ಬಾಲಕಿಯರ ತಂಡ ತಾ. ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

0

 

 

ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ ಇಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಎನ್ ಎಂ ಪಿ ಯು ಕಾಲೇಜು ಅರಂತೋಡು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೇಯಾ ಎನ್ ಬಿ 10 ನೇ ತರಗತಿ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು.

ತಂಡದಲ್ಲಿ ಬೃಂದಾ ಬಿ ಎಲ್ (ನಾಯಕಿ), ಪೂಜಾ ಯು ಜಿ, ಸುರಕ್ಷಾ ಕೆ, ಶ್ರೇಯಾ ಎನ್ ಬಿ 10 ನೇ ತರಗತಿ, ಚಿಂತನ ಪಿ, ಪ್ರೀತಿ ಪಿ, ಕೃತಿ ಎಂ ಎಸ್, ಪಾತಿಮತ್ ತನ್ಸಿಮ್, ಯಶ್ವಿತಾ ಪಿ ಪಿ, ದೀಪ್ತಿ ಕೆ ಸಿ, ಮದುಷ್ಯ ಎಂ 9 ನೇ ತರಗತಿಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ ಪೆರುಮುಂಡ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕಿ ಶಾಂತಿ ಅಳಿಕೆ ತರಬೇತಿ ನೀಡಿದರು. ತಂಡದ ವ್ಯವಸ್ಥಾಪಕರಾಗಿ ಮನೋಜ್ ಉಳುವಾರು ಸಹಕರಿಸಿದರು.

LEAVE A REPLY

Please enter your comment!
Please enter your name here