ಸುಳ್ಯ ಎನ್ನೆoಪಿಯುಸಿಯಲ್ಲಿ ತಾಲೂಕು ಮಟ್ಟದಲ್ಲಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ಸ.3ರಂದು ಪ.ಪೂ ಶಿಕ್ಷಣ ಇಲಾಖೆ ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸುಳ್ಯ ಎನ್ನೆoಪಿಯುಸಿಯಲ್ಲಿ ನಡೆಯಿತು.

ಸುಳ್ಯ ಎನ್ನೆ oಸಿಯ ಪ್ರಾ oಶುಪಾಲ ಪ್ರೊ ರುದ್ರ ಕುಮಾರ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಾಗಿದ್ದಾಗ ಮಾತ್ರ ಕಲಿಕೆಯಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾ oಶುಪಾಲೆ ಹರಿಣಿ ಪುತ್ತೂರಾಯ ಅವರು ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದು. ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮ ಬುದ್ಧಿ ಮಟ್ಟ ಚುರುಕುಗೊಳ್ಳುತ್ತದೆ,ಸದೃಢರಾಗುತ್ತೇವೆ.ಹಾಗಾಗಿ ಕ್ರೀಡೆಯಲ್ಲಿ ಶ್ರದ್ಧೆಯಿಂದ ಭಾಗವಹಿಸಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಎನ್ನೆ oಪಿಯುಸಿ ಆರಂತೋಡು ಇಲ್ಲಿನ ದೈ ಶಿ ನಿರ್ದೇಶಕರು,ತಾಲೂಕು ಕ್ರೀಡಾ ಸಂಯೋಜಕಿ ಶಾಂತಿ ಎ.ಕೆ, ಸುಳ್ಯ ಎನ್ನೆoಪಿಯುಸಿಯ ಕ್ರೀಡಾ ತರಬೇತುದಾರ ನಾಗರಾಜ್ ನಾಯ್ಕ್ ಭಟ್ಕಳ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ, ಸಾವಿತ್ರಿ ಕೆ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ನಿಶ್ವಿತಾ ಬಳಗದವರು ಪ್ರಾರ್ಥಿಸಿದರು.ಉಪನ್ಯಾಸಕ ವಿನಯ್ ನಿಡ್ಯಮಲೆ ಸ್ವಾಗತಿಸಿ,ಉಪನ್ಯಾಸಕಿ ರೇಷ್ಮಾ ಎಂ ಎಂ ನಿರೂಪಿಸಿದರು.ಉಪನ್ಯಾಸಕಿ ಹರ್ಷಿತಾ ಎ.ಬಿ ವಂದಿಸಿದರು.ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕಿ ಶಾಂತಿ, ಎನ್ನೆ oಪಿಯುಸಿ ಕ್ರೀಡಾ ತರಬೇತುದಾರ ನಾಗರಾಜ್ ನಾಯ್ಕ್ ಭಟ್ಕಳ, ವಿ ಕ್ಷೇಮಾಧಿಕಾರಿ ದಾಮೋದರ ಪಿ ಉಪಸ್ಥಿತರಿದ್ದರು.ವಿಜೇತರ ಪಟ್ಟಿಯನ್ನು ಉಪನ್ಯಾಸಕ ವಿನಯ್ ನಿಡ್ಯಮಲೆ ವಾಚಿಸಿದರು. ಬಾಲಕರ ವಿಭಾಗದಲ್ಲಿ ಎನ್ನೆ oಪಿಯುಸಿ ಅರಂತೋಡು (ಪ್ರಥಮ),ಎನ್ನೆ oಪಿಯುಸಿ ಸುಳ್ಯ ದ್ವಿತೀಯ
ಬಾಲಕಿಯರ ವಿಭಾಗದಲ್ಲಿ ಶಾರದಾ ಮಹಿಳಾ ಪಪೂ ಕಾಲೇಜು ( ಪ್ರಥಮ)ಎನ್ನೆoಪಿಯುಸಿ ಸುಳ್ಯ (ದ್ವಿತೀಯ) ಸ್ಥಾನ ಗಳಿಸಿದರು.

LEAVE A REPLY

Please enter your comment!
Please enter your name here