ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭ

0

ಸಚಿವ ಎಸ್.ಅಂಗಾರರಿಂದ ನೂತನ “ಗೋಕುಲ” ಸಭಾಭವನದ ಉದ್ಘಾಟನೆ

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನವೀಕೃತ ಕಟ್ಟಡ ಹಾಗೂ ನೂತನ “ಗೋಕುಲ” ಸಭಾಭವನದ ಉದ್ಘಾಟನಾ ಸಮಾರಂಭವು ಸೆ.5 ರಂದು ರಾಮ ದೇವಾಲಯದ ದೇಸಿ ಭವನದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಪಾರ್ವತಿ ನೇಣಾರು ವಹಿಸಿದ್ದರು.
ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ನೂತನ ಗೋಕುಲ ಸಭಾಭವನವನ್ನು ಉದ್ಘಾಟಿಸಿದರು.
ನವೀಕೃತ ಕಚೇರಿಯನ್ನು ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳ್ಳಜ ರವರು ಉದ್ಘಾಟಿಸಿದರು. ನಾಮ ಫಲಕವನ್ನು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ ಅನಾವರಣಗೊಳಿಸಿದರು.


ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ, ಒಕ್ಕೂಟದ ನಿರ್ದೇಶಕಿ ಸವಿತಾ ಎನ್.ಶೆಟ್ಟಿ, ಧರ್ಮಸ್ಥಳ ಗ್ರಾ.ಯೋಜನೆ ಯ ಮೇಲ್ವಿಚಾರಕ ಸೀತಾರಾಮ, ಕೆ.ಎಂ.ಎಫ್ ತಾಂತ್ರಿಕ ವಿಭಾಗದ ಡಾ| ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್ , ವಿಸ್ತರಣ ಅಧಿಕಾರಿ ಹರೀಶ್ ಕುಮಾರ್ ಎಂ.ಎಸ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ಇಂಜಿನಿಯರ್ ಹೇಮನಾಥ ಕೋಡ್ತುಗುಳಿ ಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪ್ರಜ್ಞಾ, ಮನುಶ್ರೀ, ಪೂಜಾಶ್ರೀ ಹಾಗೂ ಪಿ.ಯು.ಸಿ.ವಿದ್ಯಾರ್ಥಿಗಳಾದ ಭವ್ಯ, ಲಿಖಿತ್, ಹಿತೇಶ್ ಕೆ ಯವರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷೆ ನಂದಿನಿ ಎಂ, ನಿರ್ದೇಶಕರಾದ ಶೋಭಾವತಿ ಕೆ, ತನುಜ, ಪಿ.ಎಂ.ಪ್ರೇಮ, ಕುಸುಮಾವತಿ ಕುಬಲಾಡಿ, ಬೇಬಿ, ತಿಲಕ, ಸುಶೀಲಾ, ಪ್ರತಿಮಾ ಬಿ, ಶಶಿಕಲಾ ಪಿ, ಜಯಲಕ್ಷ್ಮಿ ಹೆಚ್ ಉಪಸ್ಥಿತರಿದ್ದರು.

ಶ್ರೀಮತಿ ಸುಮತಿ ದಡ್ಡಲಡ್ಕ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ನಂದಿನಿ ಎಂ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ತುಳಸಿ ವಂದಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಸಿಬ್ಬಂದಿ ದಿವ್ಯಾ ಐ, ಸರೋಜ ಕೆ, ದಮಯಂತಿ ಯವರು ಸಹಕರಿಸಿದರು. ಸಂಘ ದ ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here