ಬೆಳ್ಳಾರೆ ರೋಟರಿ ಕ್ಲಬ್ ನಿಂದ ಮೂವಪ್ಪೆ ಶಾಲಾ ಶಿಕ್ಷಕಿ ನಿರ್ಮಲಾರವರಿಗೆ ನೇಷನ್ ಬಿಲ್ಡರ್ ಅವಾರ್ಡ್

0

 

ಬೆಳ್ಳಾರೆ ರೋಟರಿಯಿಂದ ಮೂವಪ್ಪೆ ಶಾಲಾ ಶಿಕ್ಷಕಿ ನಿರ್ಮಲಾ ಕೆ.ಎಂ. ಇವರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರಧಾನ ಮಾಡಲಾಯಿತು.

ರೋಟರಿ ಇಂಡಿಯಾ ಲಿಟ್ರೆಸಿ ಮಿಷನ್ ಇವರಿಂದ ಕೊಡಮಾಡುವ ಪ್ರಶಸ್ತಿಯನ್ನು ಕೊಡಿಯಾಲ ಗ್ರಾಮದ ಮೂವಪ್ಪೆ ಶಾಲೆಯಲ್ಲಿ ನೀಡಲಾಯಿತು.
ಸಭಾಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ರೊ.ಕೇಶವಮೂರ್ತಿ ವಹಿಸಿದ್ದರು.

ರೊ.ವಿನಯಕುಮಾರ್ ಪ್ರಾಸ್ತಾವಿಕ ಮಾತನಾಡಿದರು.ಶಿಕ್ಷಕಿ ಕು.ಪುಷ್ಪ ಅಭಿನಂದನಾ ಮಾತುಗಳನ್ನಾಡಿದರು. ಝೋನಲ್ ಲೆಪ್ಟಿನೆಂಟ್ ರೊ.ಎ.ಕೆ ಮಣಿಯಾಣಿ, ಶಿಕ್ಷಣ ಸಂಯೋಜಕ ವಸಂತ ಏನೆಕಲ್,ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ ಗೌಡ ಶುಭ ಹಾರೈಸಿದರು.ಕಾರ್ಯದರ್ಶಿ ರೊ.ರವೀಂದ್ರ ಗೌಡ ವಂದನಾರ್ಪಣೆಗ್ಯೆದರು.ರೊ.ಶ್ಯಾಮಸುಂದರ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here