ಜೇಸಿಐ ಸುಳ್ಯ ಪಯಸ್ವಿನಿ ಜೇಸಿ ಸಪ್ತಾಹ “ನಮಸ್ತೆ” ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

0

ಜೇಸಿಐ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ “ನಮಸ್ತೆ “2022 ಉದ್ಘಾಟನಾ ಕಾರ್ಯಕ್ರಮವು ಸೆಪ್ಟಂಬರ್ 9 ರಂದು ಸರಕಾರಿ ಪ್ರೌಢಶಾಲೆ ಅಜ್ಜಾವರ , ಸುಳ್ಯ ಇಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆ ಯನ್ನು ಜೇಸಿಐ ಸುಳ್ಯ ಪಯಸ್ವಿನಿಯ ಘಟಕ ಅಧ್ಯಕ್ಷರಾದ ಜೇಸಿ ರಂಜಿತ್ ಕುಕ್ಕೇಟಿ ವಹಿಸಿದ್ದರು.

ಸಪ್ತಾಹದ ಉದ್ಘಾಟನೆಯನ್ನು ಪ್ರಾಂತ್ಯ ಬಿ ವಲಯ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್ ಲಾಯಿಲ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಘಟಕದ ಪೂರ್ವ ಅಧ್ಯಕ್ಷರಾದ ಜೇಸಿ ದಿನೇಶ್ ಮಡಪ್ಪಾಡಿ ಜೇಸಿ ಭೀಮರಾವ್ ವಾಷ್ಠರ್ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಗೋಪಿನಾಥ್ ಮೇತಡ್ಕ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಜಯರಾಮ್ ಬಾಳಿಲ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜೇಸಿ ಅನಿಲ್ ರಾಜ್ ಕರ್ಲಪ್ಪಾಡಿ ಅಡಿ ಸೇರಿದಂತೆ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಗುರುರಾಜ್ ಅಜ್ಜಾವರ ಉಪಸ್ಥಿತರಿದ್ದರು.


ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಯುವ ಜನಾಂಗದ ಸಬಲೀಕರಣ” ಎಂಬ ವಿಷಯದ ಬಗ್ಗೆ ವಲಯ ತರಬೇತುದಾರರಾದ ಜೇಸಿ ಪ್ರಮಿತ ಸಿ ಹಾಸ್ ರವರು ತರಬೇತಿಯನ್ನು ನೀಡಿ ಸಹಕರಿಸಿದರು
ಜೇಸಿಐ ಸಪ್ತಾಹದ ನಿರ್ದೇಶಕರಾದ ಜೇಸಿ ಶೋಭಾ ಅಶೋಕ್ ಚೂಂತಾರ್ ಸಪ್ತಾಹದ ವರದಿ ವಾಚಿಸಿದರು ಖಜಾಂಜಿ ಜೇಸಿ ಸುರೇಶ್ ಕಾಮತ್ ರವರು ಜೇಸಿ ವಾಣಿ ವಾಚಿಸಿದರು ಜೇಸಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ವೇದಿಕೆಗೆ ಆಹ್ವಾನಿಸಿ ಜೇಸಿ ಶಶ್ಮಿ ಭಟ್ ಕಾರ್ಯಕ್ರಮದಲ್ಲಿ ಸಹಕರಿಸಿದರು ಜೇಸಿ ಕಾರ್ಯದರ್ಶಿ ನವೀನ್ ಕುಮಾರ್ ವಂದಿಸಿದರು
ಜೇಸಿ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ವಲಯ 15ರ ಪೂರ್ವ ಅಧ್ಯಕ್ಷ ಘಟಕದ ಪೂರ್ವ ಅಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ಸೇರಿದಂತೆ ಪದಾಧಿಕಾರಿಗಳಾದ ಜೇಸಿ ರಮ್ಯಾ ರಂಜಿತ್ ಕುಕ್ಕೆಟಿ ಜೇಸಿ ತಾರಾ ಮಾಧವ ಗೌಡ ಜೇಸಿ ಚಾರಿಸ್ಮಾ ಆಚಾರ್ಯ ಜೇಸಿ ಹೃಷಿಕೇಶ್ ಮಡಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here