ಮಂಗಳೂರಿನ ಶ್ರೀಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೃಷ್ಣ ಪ್ರಸಾದ್ ಮಡ್ತಿಲ

0

 

ಉಪಾಧ್ಯಕ್ಷರಾಗಿ ಸುಜಿತ್ ಕೊಟ್ಟಾರಿ ಕಲ್ಲಡ್ಕ

ಮಂಗಳೂರಿನ ಶ್ರೀಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಕೃಷ್ಣಪ್ರಸಾದ್ ಮಡ್ತಿಲ ಉಪಾಧ್ಯಕ್ಷರಾಗಿ ಸುಜಿತ್ ಕೊಟ್ಟಾರಿ ಕಲ್ಲಡ್ಕರವರು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಸೆ.3 ರಂದು ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾದ ನವೀನ್ ರವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆದಿರುತ್ತದೆ.
ಚುನಾವಣಾಧಿಕಾರಿಯವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಲ್ಲಾ ನೂತನ ನಿರ್ದೇಶಕರನ್ನು ಅಭಿನಂದಿಸಿದರು.
ನೂತನ ಆಡಳಿತ ಮಂಡಳಿಯನ್ನು ಸಾಮಾಜಿಕ ಕಾರ್ಯಕರ್ತರಾದ ನ. ಸೀತಾರಾಮ ಸುಳ್ಯ ಅಭಿನಂದಿಸಿ ಶ್ರೀಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘದ ಸಾಧನೆ ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು.

ನೂತನವಾಗಿ ನಿರ್ದೇಶಕರುಗಳಾಗಿ ಆಯ್ಕೆಯಾದ ಸಚಿನ್ ಜೈನ್ ಸವಣೂರು, ಪ್ರಶಾಂತ್ ಮಡಂತ್ಯಾರ್, ಜಯಪ್ರಕಾಶ್ ಸೂರಿಂಜೆ, ಅರವಿಂದ ಬೆಂಗ್ರೆ ಸುರತ್ಕಲ್, ಪ್ರಕಾಶ್ಚಂದ್ರ ರೈ ಕೈಕಾರ ಪುತ್ತೂರು, ಕಿಶೋರ್ ಶಿರಾಡಿ, ಸುಭದ್ರ ಎನ್ ರಾವ್ ಪೆರ್ಮಂಕಿ ಮಂಗಳೂರು, ಪೂಜಾ ಪೈ ಮಂಗಳೂರು, ಕೃಷ್ಣ ಕೊಂಪದವು, ಹರಿಶ್ಚಂದ್ರ ಸುಳ್ಯ, ಲೋಕೇಶ್ ಸುಳ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here