- ಸರಕಾರದಿಂದ ಹೈನುಗಾರಿಕೆಗೆ ಪ್ರೋತ್ಸಾಹ – ಸಂಜೀವ ಮಠಂದೂರು
ಪುತ್ತೂರು: ಕೇಂದ್ರ ಸರಕಾರದ ಕೇಂದ್ರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪುತ್ತೂರಿನಲ್ಲಿ ೨೬ ಮಂದಿ ಹೈನುಗಾರಿಕೆ ಫಲಾನುಭವಿಗಳಿಗೆ ತಲಾ ರೂ. ೩೬,೩೦೦ ದರದ ಮೇವು ಕತ್ತರಿಸುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ವಿತರಿಸುವ ಕಾರ್ಯಕ್ರಮ ಸೆ.೧೦ರಂದು ಪುತ್ತೂರ ಪಶು ವೈದ್ಯಕೀಯ ಇಲಾಖೆಯಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಅವರು ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿ ಸರಕಾರ ಹೈನುಗಾರರಿಗೆ ಪ್ರೋತ್ಸಾಹವನ್ನು ವಿವಿಧ ರೀತಿಯಲ್ಲಿ ನೀಡುತ್ತಿದೆ. ಹೈನುಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ಪ್ರಸನ್ನ ಹೆಬ್ಬಾರ್ ಸೇರಿದಂತೆ ಇತರ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.