ಮರ್ದಾಳ ಗ್ರಾಮ ಸಭೆ: ಹೆಚ್ಚಿನ ಇಲಾಖಾಧಿಕಾರಿಗಳು ಗೈರು -ಗ್ರಾಮ ಸಭೆ ಮುಂದೂಡಲು ಆಗ್ರಹ

0

ಕಡಬ: ಮರ್ದಾಳ ಗ್ರಾಮ ಪಂಚಾಯತ್‌ ನ ಗ್ರಾಮಸಭೆಯು ಜ.25ರಂದು ಗ್ರಾ.ಪಂ ಅಧ್ಯಕ್ಷ ಹರೀಶ್ ಕೊಡಂದೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು.  

ಗ್ರಾಮಸಭೆಗೆ ಹೆಚ್ಚಿನ ಇಲಾಖಾಧಿಕಾರಿಗಳು ಗೈರು ಹಾಜರಾಗಿರುವುದರಿಂದ ಗ್ರಾಮ ಸಭೆ ನಡೆಸುವುದು ಬೇಕೆ ಬೇಡವೇ ಎಂದು ಚರ್ಚೆ ನಡೆದಿದೆ. ಗ್ರಾಮಸ್ಥರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದರಿಂದ ಗ್ರಾಮಸಭೆ ನಡೆಸುವುದು ಬೇಕೆ ಬೇಡವೇ ಎಂಬ ಚರ್ಚೆಯೂ ನಡೆಯಿತು.

ಕೇವಳ ಮೂರ್ನಾಲ್ಕು ಇಲಾಖಾಧಿಕಾರಿಗಳು ಆಗಮಿಸಿದ್ದರು. ಗ್ರಾಮಸ್ಥರು ಕೂಡ ಕಡಿಮೆ ಸಂಖ್ಯೆಯಲ್ಲಿ ಸೇರಿದ್ದರು, ಈ ಬಗ್ಗೆ ಗ್ರಾಮಸ್ಥರಾದ ವಿಜಯಕುಮಾರ್ ರೈ ಕರ್ಮಾಯಿ, ಗಣೇಶ್ ಕೈಕುರೆ, ಗಣೇಶ್ ಮೊದಲಾದವರು ಮಾತನಾಡಿ ಕಾಟಾಚಾರಕ್ಕೆ ಗ್ರಾಮ ಸಭೆ ಮಾಡಬೇಡಿ. ನೀವು ಸರಿಯಾದ ಪ್ರಚಾರ ಮಾಡಿಲ್ಲ, ಆದುದರಿಂದ ಗ್ರಾಮಸ್ಥರು ಆಗಮಿಸಲಿಲ್ಲ ಎಂದು ಆರೋಪ ವ್ಯಕ್ತಪಡಿಸಿದರು. ಈ ಬಗ್ಗೆ ಪಿಡಿಒ ಹಾಗೂ ಅಧ್ಯಕ್ಷರು ಉತ್ತರಿಸಿ ನಾವು ಮೈಕ್ ಮೂಲಕವೇ ಪ್ರಚಾರ ಮಾಡಿದ್ದೇವೆ ಎಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಗ್ರಾಮಸಭೆ ಮತ್ತೆ ಆರಂಭಗೊಂಡಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ನೋಡೆಲ್ ಅಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here