ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಬೆಳ್ಳಾರೆ ವಲಯಮಟ್ಟದ ಪ್ರತಿಭಾಕಾರಂಜಿ ಸಮಾರೋಪ -ಕೆ.ಪಿ.ಎಸ್ ಬೆಳ್ಳಾರೆ ಸಮಗ್ರ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಇದರ ಆಶ್ರಯದಲ್ಲಿ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ಬೆಳ್ಳಾರೆ ವಲಯಮಟ್ಟದ ಪ್ರತಿಭಾಕಾರಂಜಿ ಸಮಾರೋಪ ಸಮಾರಂಭದಲ್ಲಿ ಕೆ.ಪಿ.ಎಸ್ ಬೆಳ್ಳಾರೆ ಸಮಗ್ರ ಪ್ರಶಸ್ತಿ ಯನ್ನು ಪಡೆದುಕೊಂಡಿದೆ.


ಸಮಗ್ರ ಪ್ರಶಸ್ತಿ ಯಲ್ಲಿ ಪ್ರಥಮ ಸ್ಥಾನವನ್ನು ಕೆ.ಪಿ.ಎಸ್ ಬೆಳ್ಳಾರೆ ಪಡೆದುಕೊಂಡರೆ, ದ್ವಿತೀಯ ಸ್ಥಾನ ವನ್ನು ಭಗವಾನ್ ಸತ್ಯಸಾಯಿ ಚೊಕ್ಕಾಡಿ, ತೃತೀಯ ಸ್ಥಾನ ವನ್ನು ವಿನೋಬನಗರ ವಿವೇಕಾನಂದ ಇಂಗ್ಲೀಷ್ ಮಾದ್ಯಮ ಪ್ರೌಢ ಶಾಲೆ ಪಡೆದುಕೊಂಡಿದೆ.
ಪ್ರಶಸ್ತಿಯನ್ನು ಜಾಲ್ಸೂರು ಗ್ರಾ.ಪಂ.ಅಧ್ಯಕ್ಷ ಕೆ.ಎಂ. ಬಾಬು ವಿತರಿಸಿದರು. ನಾನಾ ಸ್ಪರ್ಧೆ ಗಳಲ್ಲಿ ವಿಜೇತರಿಗೂ ಬಹುಮಾನ ವಿತರಿಸಲಾಯಿತು.


ಪ್ರತಿಭಾಕಾರಂಜಿ ನೋಡೆಲ್ ಅಧಿಕಾರಿ ವಸಂತ ಏನೆಕಲ್ಲು, ಸಿ.ಆರ್.ಪಿಗಳಾದ ಅನುರಾಧ, ಸವಿತಾಕುಮಾರಿ, ಬಿ.ಆರ್.ಪಿ ರಮ್ಯ,
ಪಯಸ್ವಿನಿ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಇದ್ದರು. ಶಿಕ್ಷಕ ಕುಮಾರ್ ಲಮಾಣಿ ಸ್ವಾಗತಿಸಿ, ಶಿಕ್ಷಕ ಶಿವಪ್ರಕಾಶ್ ವಂದಿಸಿದರು. ಭಗವಾನ್ ಸತ್ಯಸಾಯಿ ಚೊಕ್ಕಾಡಿ ಪ್ರೌಢಶಾಲಾ ಶಿಕ್ಷಕ ವೆಂಕಟಗಿರಿ, ಪಯಸ್ವಿನಿ ಪ್ರೌಢಶಾಲಾ ಶಿಕ್ಷಕಿ ಸವಿತಾ ಕುಮಾರಿ ನಿರೂಪಿಸಿದರು.

LEAVE A REPLY

Please enter your comment!
Please enter your name here