ಅಪಘಾತ, ಅಪರಾಧ ರಹಿತ ಚಾಲನೆ – ಕೆಎಸ್‌ಆರ್‌ಟಿಸಿಯ 11 ಚಾಲಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

0

ಪುತ್ತೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 15 ವರ್ಷಗಳ ಕಾಲ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿರುವ ಪುತ್ತೂರು‌ ವಿಭಾಗದ 11 ಮಂದಿ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನವು ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ದೇಶದ 73 ನೇ ಗಣರಾಜ್ಯೋತ್ಸವದಲ್ಲಿ ನಡೆಯಿತು.

 


ಪುತ್ತೂರು ಘಟಕದ ಹರೀಶ್ಚಂದ್ರ ಕೆ., ಬಿ.ಕೇಶವ ಗೌಡ, ನಂದ ಕುಮಾರ್, ಧರ್ಮಸ್ಥಳ ಘಟಕದ ಎಸ್.ಉಮೇಶ್, ಪ್ರವೀಣ ಸಾಲಿಯಾನ್, ಹೆಚ್.ಪಿ ರಾಜು, ವಸಂತ ಬಂಗೇರ, ಸುಳ್ಯ ಘಟಕದ ಕೆ.ಪಿ ಮಹಮ್ಮದ್, ಪಿ.ಎ ಶಿವರಾಮ್, ಮಡಿಕೇರಿ ಘಟಕದ ಟಿ.ಯು ಸತೀಶ ಹಾಗೂ ಎಲ್.ಗೋಪಾಲಕೃಷ್ಣರವರು ಚಿನ್ನದ ಪದಕ ಪುರಸ್ಕಾರ ಪಡೆದುಕೊಂಡರು. ಪುತ್ತೂರಿನ ನಂದ ಕುಮಾರ್ ಅವರು ನಿಧನರಾಗಿದ್ದು ಅವರ ಪತ್ನಿ ಪ್ರಶಸ್ತಿ ಸ್ವೀಕರಿಸಿದರು.

ಚಿನ್ನದ ಪದಕದಲ್ಲಿ 32 ಗ್ರಾಂ ಬೆಳ್ಳಿ ಪದಕದ ಮೇಲೆ 8ಗ್ರಾಂ ಚಿನ್ನದ ಗಂಡಭೇರುಂಡ ಚಿಹ್ನೆ ಹೊಂದಿರುವ ಪದಕ, ರೂ.೫೦೦೦ ನಗದು ಪುರಸ್ಕಾರ ಹಾಗೂ ಮಾಸಿಕ ರೂ.೧೦೦ರ ಪ್ರೋತ್ಸಾಹ ಭತ್ಯೆಯು ದೊರೆಯಲಿದೆ.

ಪುತ್ತೂರು ವಿಭಾಗದಿಂದ 2016-17ನೇ ಸಾಲಿನಲ್ಲಿ ಒಟ್ಟು 13 ಮಂದಿ ಚಾಲಕರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಗೊಂಡಿದ್ದರು. ಈ ಪೈಕಿ ನಂದೀಶ್ ಹಾಗೂ ವಿಜಯ ಕುಮಾರ್‌ರವರಿಗೆ ೨೦೨೧ರ ಪದಕಕ್ಕ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ.

LEAVE A REPLY

Please enter your comment!
Please enter your name here