ಮುಳಿಯ ಜ್ಯುವೆಲ್ಸ್‌ನಲ್ಲಿ 3ನೇ ಹಂತದ ಬಂಪರ್ ಬಹುಮಾನ

0

  • ಗುಣಮಟ್ಟ, ನಂಬಿಕೆಗೆ ಮುಳಿಯ ಮಾದರಿ-ಕಿಶೋರ್ ಕುಮಾರ್ ಕೊಡ್ಗಿ
  • ಸಂಸ್ಥೆಯ ಎಲ್ಲಾ ಶಾಖೆಗಳಿಂದ ಒಟ್ಟು 1.50 ಲಕ್ಷ ಕೂಪನ್‌ನಲ್ಲಿ ವಿಜೇತರ ಆಯ್ಕೆ
  •  ಬೆಳ್ತಂಗಡಿ ಶಾಖೆಯ ಗ್ರಾಹಕಿ ಪಲ್ಲವಿರಾಜ್‌ಗೆ ಮಾರುತಿ ಎಸ್‌ಪ್ರೆಸ್ಸೋ ಕಾರು

ಪುತ್ತೂರು:ಪುತ್ತೂರಿನ ಹೆಸರಾಂತ ಸ್ವರ್ಣಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಲಕ್ಕಿ ಡ್ರಾ ಮತ್ತು ಬಂಪರ್ ಡ್ರಾದ ಮೂರನೇ ಹಂತದ ಡ್ರಾ ಜ.25ರಂದು ಸಂಜೆ ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ನಡೆಯಿತು.ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಬಂಪರ್ ಬಹುಮಾನ ವಿಜೇತರನ್ನು ಲಾಟರಿ ಮಾದರಿಯಲ್ಲಿ ಹಾಗೂ ಇತರ ಅದೃಷ್ಟಶಾಲಿ ವಿಜೇತರ ಆಯ್ಕೆಯನ್ನು ಚೀಟಿ ಎತ್ತುವುದರ ಮೂಲಕ ನಡೆಸಿಕೊಟ್ಟರು.ಬಂಪರ್ ಬಹುಮಾನವಾಗಿ ಮಾರುತಿ ಎಸ್‌ಪ್ರೆಸ್ಸೋ ಕಾರನ್ನು ಬೆಳ್ತಂಗಡಿ ಶೋ ರೂಮ್ ಗ್ರಾಹಕಿ ಪಲ್ಲವಿರಾಜ್ ಅವರು ವಿಜೇತರಾದರು.


ಗುಣಮಟ್ಟ, ನಂಬಿಕೆಗೆ ಮುಳಿಯ ಮಾದರಿ: ಡ್ರಾ ನೆರವೇರಿಸಿಕೊಟ್ಟ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ಸಮಾಜದ ವ್ಯವಸ್ಥೆಯಲ್ಲಿ ಮೈ ಬೆವರು ಸುರಿಸದೆ ಅಥವಾ ಕಷ್ಟಪಡದೆ ಬಹಳ ಬೇಗ ಹಣ ಆಗಬೇಕೆಂಬ ಆಸೆ ಇರುತ್ತದೆ.ಆದರೆ ಇದಕ್ಕೆ ವಿರುದ್ಧವಾಗಿ ಮುಳಿಯ ಸಂಸ್ಥೆಯ ಸಹೋದರರು ತಮ್ಮ ಶ್ರಮ ವಹಿಸಿ ಗ್ರಾಹಕರಿಗೆ ಗುಣಮಟ್ಟದ ಚಿನ್ನ ನೀಡುತ್ತಾರೆ.ಇದಕ್ಕೆ ಅವರ ತಂದೆ ಶ್ಯಾಮ್ ಭಟ್ ದಂಪತಿ ಶ್ರೀರಕ್ಷೆ ಇದೆ.ಇದರ ಜೊತೆಗೆ ಗ್ರಾಹಕರ ನಂಬಿಕೆಗೆ ಸರಿಯಾಗಿ ಸೇವೆ ನೀಡುತ್ತಿರುವುದು ಎಲ್ಲರಿಗೂ ಮಾದರಿ.ಇಂತಹ ಸಂಸ್ಥೆ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಬೆಂಗಳೂರಿನಲ್ಲಿ ತನ್ನ ಗ್ರಾಹಕರ ಮನಗೆದ್ದಿದೆ ಎಂದು ಹೇಳಿದರಲ್ಲದೆ, ಮುಂದೆ ಕುಂದಾಪುರದಲ್ಲೂ ಸಂಸ್ಥೆಯನ್ನು ತೆರೆಯುವಂತೆ ಶುಭಹಾರೈಸಿದರು

ವರ್ಷಗಳು ಮುಂದೆ ಹೋದ ಹಾಗೆ ಗ್ರಾಹಕರ ಸಹಕಾರ ಅಗತ್ಯ:
ಚಿನ್ನದ ಖರ್ಚು ಉಳಿಕೆಯ ಖರ್ಚು ಕೇಶವಪ್ರಸಾದ್
ಮುಳಿಯ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೨ ವರ್ಷದ ಹಿಂದೆಯೇ ನಮ್ಮ ಸಂಸ್ಥೆಗೆ ೭೫ ವರ್ಷ ತುಂಬಿತ್ತು.ಆದರೆ ಕೊರೋನಾದಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.ಕೊರೋನಾ ಬಳಿಕ ಎಲ್ಲಾ ಗ್ರಾಹಕರನ್ನು ಸೇರಿಸಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ನಮ್ಮ ಮುಂದಿದೆ ಎಂದರು.ದಾನ ಮಾಡುವ ಬದಲು ಹಣವನ್ನು ಖರ್ಚು ಮಾಡಿದರೆ ಯಾವುದೇ ವಸ್ತುವಿನ ಉತ್ಪಾದಕನಿಂದ ಹಿಡಿದು ಅದರ ಕೊನೆಯ ಹಂತದ ತನಕ ಹಂಚಿ ಹೋಗುತ್ತದೆ.ಅದೇ ರೀತಿ ಚಿನ್ನದ ಖರ್ಚು ಉಳಿಕೆಯ ಖರ್ಚಾಗಲಿದೆ ಎಂದವರು ಹೇಳಿದರು.

ಸಂಸ್ಥೆಯಿಂದ ಗ್ರಾಹಕರಿಗೆ ವಿವಿಧ ಯೋಜನೆಷ್ಣನಾರಾಯಣ: ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ೭೫ ವರ್ಷದ ನಡುವೆ ಬಹಳಷ್ಟು ಗ್ರಾಹಕರು ಬಂದು ಹೋಗಿದ್ದಾರೆ.ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಸಹಕಾರ ಇದೆ.ಇಂತಹ ಸಂದರ್ಭದಲ್ಲಿ ಸಂಸ್ಥೆ ಕೂಡಾ ಗ್ರಾಹಕರಿಗೆ ವಿವಿಧ ಯೋಜನೆ ರೂಪಿಸಿತ್ತು.ಖರೀದಿ ಮಾಡಿದ ಪ್ರತಿಯೊಬ್ಬ ಗ್ರಾಹಕರಿಗೂ ಕೂಪನ್ ನೀಡಿ ಎಲ್ಲರೂ ಬಹುಮಾನಕ್ಕೆ ಅರ್ಹರಾಗುವಂತೆ ಮಾಡಿzವೆ.ನಮ್ಮನ್ನು ಪೋಷಿಸಿ ಬೆಳೆಸಿದ ಗ್ರಾಹಕರಿಗೆ ೩ನೇ ಹಂತದ ಲಕ್ಕಿ ಡ್ರಾ ಮತ್ತು ಬಂಪರ್ ಡ್ರಾ ಏರ್ಪಡಿಸಿzವೆ ಎಂದರು.ಮುಳಿಯ ಸಂಸ್ಥೆಯ ಹಿರಿಯ ಮಾರ್ಗದರ್ಶಕ ಶರಾಫ್ ಮುಳಿಯ ಶ್ಯಾಮ್ ಭಟ್, ಹಿರಿಯರಾದ ಸುಲೋಚನಾ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವ್ಯಶ್ರೀ ಪ್ರಾರ್ಥಿಸಿದರು. ಶೋ ರೂಮ್ ಮ್ಯಾನೇಜರ್ ರಾಮ್‌ದೇವ್ ಸ್ವಾಗತಿಸಿ, ಸಂಜೀವ ವಂದಿಸಿದರು.ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಚಿನ್ಮಯಿ ಇ.ಭಟ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ವೇಣು ಶರ್ಮ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

1.50 ಲಕ್ಷ ಕೂಪನ್
ಮುಳಿಯ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಚಿನ್ನಾಭರಣ ಖರೀದಿಸಿದ್ದ ಗ್ರಾಹಕರಿಂದ ಒಟ್ಟು ೧.೫೦ ಲಕ್ಷ ಕೂಪನ್‌ಗಳು ಬಂದಿದ್ದು ಇದರಲ್ಲಿ ಅದೃಷ್ಟಶಾಲಿ ಗ್ರಾಹಕರ ಆಯ್ಕೆಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಚೀಟಿ ಎತ್ತುವುದರ ಮೂಲಕ ಡ್ರಾ ನಡೆಸಿದರು.ಬಂಪರ್ ಬಹುಮಾನ ವಿಜೇತರ ೬ ಸಂಖ್ಯೆಗಳನ್ನು ಲಾಟರಿ ಮಾದರಿಯಲ್ಲಿ ಡ್ರಾ ನಡೆಸಿದರು.೧೦ ಮಿಲ್ಟನ್ ಗ್ಲಾಸ್, ಬೆಳ್ಳಿ ಆಭರಣ, ಮಿಕ್ಸಿ, ೩ ಮಂದಿಗೆ ಗ್ರೈಂಡರ್, ೫ ಗ್ರಾಹಕರಿಗೆ ಮೊಬೈಲ್, ಇಬ್ಬರಿಗೆ ಚಿನ್ನಾಭರಣ, ಒಬ್ಬರಿಗೆ ವಜ್ರಾಭರಣ, ಕೊನೆಯದಾಗಿ ಬಂಪರ್ ಬಹುಮಾನ ವಿಜೇತರ ಆಯ್ಕೆ ನಡೆಸಲಾಯಿತು.ಮುಳಿಯ ಫೇಸ್ ಬುಕ್ ಪೇಜ್ ಲೈವ್ ಮೂಲಕ ನೇರಪ್ರಸಾರ ಮಾಡಲಾಗಿತ್ತು.

ಚಿನ್ನದೊಂದಿಗೆ ಮನೆಮನೆಗೆ ಕ್ಯಾಂಪ್ಕೋ ಚಾಕಲೇಟ್
ಸಂಸ್ಥೆಗೆ ಚಿನ್ನ ಖರೀದಿಗೆ ಬಂದವರಿಗೆ ಕ್ಯಾಂಪ್ಕೋ ಚಾಕಲೇಟ್ ಗಿಫ್ಟ್ ಪ್ಯಾಕೆಟ್ ಕೊಡುವಂತಹ ವ್ಯವಸ್ಥೆ ಮಾಡಿದರೆ ಮನೆ ಮನೆಗೆ ಚಿನ್ನದ ಜೊತೆ ಕ್ಯಾಂಪ್ರೋ ಚಾಕಲೇಟ್ ಕೂಡಾ ಹೋಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಮುಳಿಯ ಜ್ಯುವೆಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಿಗೆ ಮನವಿ ಮಾಡಿದರು. ಕ್ಯಾಂಪ್ರೋ ಅಧ್ಯಕ್ಷರ ಕೋರಿಕೆಯಂತೆ, ಎಲ್ಲಿ ಸಾಧ್ಯವಿದೆಯೋ ಅಲ್ಲಿ ಚಾಕಲೇಟ್‌ನ್ನು ಗ್ರಾಹಕರಿಗೆ ನೀಡುವ ಅಥವಾ ಕಿಯೋಕ್ಸ್ ರೀತಿಯಲ್ಲಿ ನೋಡುವ ಕಾರ್ಯಕ್ರಮ ಮಾಡಲಿzವೆ ಎಂದು ಸಂಸ್ಥೆಯ ಸಿಎಂಡಿ ಮುಳಿಯ ಕೇಶವಪ್ರಸಾದ್ ಭರವಸೆ ನೀಡಿದರು.

LEAVE A REPLY

Please enter your comment!
Please enter your name here