ಗಣರಾಜ್ಯೋತ್ಸವ ಧ್ವಜಾರೋಹಣ ನಡೆಸದ ಬಾರ್‍ಯ ಗ್ರಾಮ ಪಂಚಾಯಿತಿ…!!!

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಾರ್ಯ ಗ್ರಾಮ ಪಂಚಾಯತ್‌ನಲ್ಲಿ ದ್ವಜಾರೋಹಣ ಮಾಡದೆ ಗಣರಾಜ್ಯೋತ್ಸವವನ್ನು ಕಡೆಗಣಿಸಿದ ಘಟನೆ ನಡೆದಿದೆ. ಎಲ್ಲೆಡೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದರೆ, ಬಾರ್ಯ ಗ್ರಾಮ ಪಂಚಾಯತ್ ಆಡಳಿತ ಮಾತ್ರ ಗಣರಾಜ್ಯೋತ್ಸವಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿ ಗ್ರಾಮಸ್ಥರ
ಕೆಂಗಣ್ಣಿಗೆ ಗುರಿಯಾಗಿದೆ.

ನನಗೆ ಮಾಹಿತಿ ಇರಲಿಲ್ಲ-ಅಧ್ಯಕ್ಷೆ
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಶರತ್ ಪ್ರತಿಕ್ರಿಯಿಸಿ “ನನಗೆ ಗಣರಾಜ್ಯೋತ್ಸವ ಬಾಬ್ತು ಧ್ವಜಾರೋಹಣ ಮಾಡುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮಾತ್ರವಲ್ಲದೆ ಪಂಚಾಯತ್ ಪಿಡಿಓ. ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಕಳೆದ ವರ್ಷವೂ ಗಣರಾಜ್ಯೋತ್ಸವ ಆಚರಣೆ ನಡೆದಿಲ್ಲ ಎಂಬ ಮಾಹಿತಿ ಇತ್ತು. ಹಾಗಾಗಿ ಈ ಬಾರಿಯೂ ಧ್ವಜಾರೋಹಣ ನಡೆಸಲಿಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here