ಸುಳ್ಯ: ಪಿ.ಎಲ್.ಡಿ. ಬ್ಯಾಂಕ್ ಮಹಾಸಭೆ

0

 

 

ಸಾಲ ವಸೂಲಾತಿಯಲ್ಲಿ ಪ್ರಗತಿಯಿದೆ : ವಿಶ್ವನಾಥ ಬಿಳಿಮಲೆ

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ವಾರ್ಷಿಕ ಮಹಾಸಭೆ ಸೆ‌. 17ರಂದು ಸುಳ್ಯ ಸಿ.ಎ. ಬ್ಯಾಂಕಿನ ಸಭಾಭವನದಲ್ಲಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕಿನ ಉಪಾಧ್ಯಕ್ಷ ಪ್ರಭಾಕರ ನಾಯಕ್, ಕೋಶಾಧಿಕಾರಿ ಸೋಮನಾಥ ಕೆ, ನಿರ್ದೇಶಕರಾದ ರಮೇಶ್ ಪಿ, ಮಹಾವೀರ ಬಿ, ಚಂದ್ರಶೇಖರ ರೈ, ಕು. ಭಾಗೀರಥಿ ಮುರುಳ್ಯ, ಶೇಷಪ್ಪ ಪಿ, ಭಗೀರಥ ಕೋಲ್ಚಾರು, ಶೇಷಪ್ಪ ಪಿ, ಶ್ರೀಮತಿ ದೇವಮ್ಮ ಚಂದ್ರಶೇಖರ ಎಂ, ಲೆಕ್ಕ ಪರಿಶೋಧಕರಾದ ಗಣೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಪ್ರಭಾಕರ ನಾಯಕ್ ಸ್ವಾಗತಿಸಿದರು.

 

 


ಬ್ಯಾಂಕಿನ ಪ್ರ. ವ್ಯವಸ್ಥಾಪಕಿ ಶ್ರೀಮತಿ ಉಷಾ ಸುವರ್ಣ ವಾರ್ಷಿಕ ವರದಿ ವಾಚಿಸಿದರು.
ದೊಡ್ಡ ಮೊತ್ತದ ಸಾಲ ನೀಡುವಾಗ ವಾಯಿದೆ ಹೆಚ್ಚು ನೀಡಬೇಕು. ಅವಧಿ ಕಡಿಮೆ ಇರುವ ಕಾರಣ ಸಾಲಗಾರರಿಗೆ ಮರುಪಾವತಿ ಕಷ್ಟ ಆಗುತ್ತದೆ ಸಭಿಕರು ಹೇಳಿದ್ದಕ್ಕೆ ಉತ್ತರಿಸಿದ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಬಿಳಿಮಲೆಯವರು ನಿಮ್ಮ ಸಲಹೆ ಸರಿಯಾಗಿದೆ. ಆದರೆ ನಮಗೆ ಮೇಲಾಧಿಕಾರಿಗಳ ಆದೇಶ ಪಾಲಿಸಬೇಕಲ್ವಾ. ಈ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದರು. ಸ್ವಂತ ಬಂಡವಾಳ ಸಾಲದ ವಸೂಲಾತಿ ತುಂಬಾ ಕಡಿಮೆ ಇದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಶಿಧರ ಶೆಟ್ಟಿ ಕೇಳಿದರು.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಿ ಎಂದು ಶ್ರೀಪತಿ ಭಟ್ ಹೇಳಿದರು. ಈ ಬಗ್ಗೆ ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ. ಹಂತ ಹಂತವಾಗಿ ಮುಂದೆ ಹೋಗಬೇಕಷ್ಟೆ. ಏಕಾಏಕಿ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷರು ಉತ್ತರಿಸಿದರು. ಸ್ವಂತ ಬಂಡವಾಳ ಸಾಲದ ವಸೂಲಾತಿ ಪ್ರಮಾಣ ತುಂಬಾ ಕಡಿಮೆ ಇದೆ. ಅಂತಹ ಸಾಲಗಾರರಿಗೆ ಬಡ್ಡಿಯಲ್ಲಿ ಸ್ವಲ್ಪ ರಿಯಾಯಿತಿ ಮಾಡಿ ವಸೂಲಾತಿಗೆ ಕ್ರಮ ಕೈಗೊಳ್ಳಿ ಎಂದು ಶ್ರೀಪತಿ ಭಟ್ ಹೇಳಿದರು. ಹಳೆ ಬಾಕಿ ಸಾಲ ಬಾಕಿಯಾದವರನ್ನು ರಿಯಾಯಿತಿ ಮಾಡಿ ಒಂದೇ ಕಂತಿನಲ್ಲಿ ಕಟ್ಟಲು ವ್ಯವಸ್ಥೆ ಮಾಡಿ. ರೂ. 17 ಕೋಟಿ ಠೇವಣಿಗೆ ಬಡ್ಡಿ ಕೊಡುವಾಗ ಅದನ್ನು ಇಟ್ಟುಕೊಳ್ಳುವ ಬದಲಿಗೆ ಅದನ್ನು‌ ವಿಶೇಷವಾದ ಸಾಲ ಸೌಲಭ್ಯಗಳನ್ನು ಕೊಡುವುದು ಒಳ್ಳೆಯದು ಎಂದು ದಾಮೋದರ ಮಂಚಿ ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ ಎಂದರು. ಡೆಪಾಸಿಟ್ ಹೆಚ್ಚು ಮಾಡಿ ಲೋನ್ ಕಡಿಮೆ ಮಾಡಿದರೆ ಸಂಘಕ್ಕೆ ನಷ್ಟ ಅಲ್ಲವೆ ಎಂದು ಶಶಿಧರ ರೈ ಹೇಳಿದರು. ಸಾಲ ಕೊಡುವಾಗ ಎಕರೆಗೆ ಮಿತಿ ನೀಡಿ ವೈಯಕ್ತಿಕ ಸಾಲ ನೀಡುವಾಗ ಅವಧಿ ವಿಸ್ತರಿಸಿ, ಈ ಬಗ್ಗೆ ಬೈಲಾ ತಿದ್ದುಪಡಿ ಮಾಡಿ. ವಸೂಲಾತಿಗೆ ಅನುಕೂಲವಾಗುವ ರೈತರನ್ನು ನೋಡಿಕೊಂಡು ಮಿತಿಯನ್ನು ನಿರ್ಧರಿಸಿ ಎಂದು ವಿಷ್ಣು ಭಟ್ ನೆಲ್ಲೂರು ಕೆಮ್ರಾಜೆ ಹೇಳಿದರು. ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಬಿಳಿಮಲೆಯವರು ಬ್ಯಾಂಕಿನ ಅರ್ಹ ಸದಸ್ಯರಿಗೆ ಸಕಾಲದಲ್ಲಿ ಸಾಲ ಸೌಲಭ್ಯವನ್ನು ನೀಡಿದ್ದೇವೆ. ಆದರೆ ಸಾಲ ಮರುಪಾವತಿ ಮಾಡುವಾಗ ಸಕಾಲದಲ್ಲಿ ಮರುಪಾವತಿ ಮಾಡಿ. ನಮಗೂ ಬ್ಯಾಂಕಿಗೂ ಸಂಬಂಧ ಇಲ್ಲದ ಹಾಗೆ ಮಾಡಬೇಡಿ. ಈ ವರ್ಷ ಸಾಲ ವಸೂಲಾತಿಯಲ್ಲಿ ಪ್ರಗತಿ ಕಂಡಿದೆ‌. ಮುಂದೇಯೂ ತಮ್ಮೆಲ್ಲರ ಸಹಕಾರ ಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಬ್ಯಾಂಕಿನ ಪ್ರ. ವ್ಯವಸ್ಥಾಪಕಿ ಶ್ರೀಮತಿ ಉಷಾ ಸುವರ್ಣ ಮತ್ತು ಸಿಬ್ಬಂದಿ ಶ್ರೀಮತಿ ಲತಾ ಕುಮಾರಿ ಡಿ ಪ್ರಾರ್ಥಸಿದರು. ನಿರ್ದೇಶಕ ರಮೇಶ್ ಪಡ್ಪು ವಂದಿಸಿದರು. ಸಿಬ್ಬಂದಿ ಲೋಹಿತ್ ಎನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here