ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್ ಮಹಾಸಭೆ

0

ಪುತ್ತೂರು: ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್‌ನ 2021ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಚುನಾವಣೆಯು ಜ.26ರಂದು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಮಂಜುನಾಥ್‌ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಹೆಚ್‌ಎಂಎಸ್‌ನ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಹಮ್ಮದ್ ರಫೀಕ್‌ರವರು ಮಾತನಾಡಿ, ಸಂಘದ ಅವಶ್ಯಕತೆಯ ಬಗ್ಗೆ ಸದಸ್ಯರಿಗೆ ತಿಳಿಸಿದರು. ನಿರ್ದೇಶಕರಾದ ಸುಬ್ರಾತ್ ಆರ್.ಎಂ., ನಿರಂಜನ್ ಎಂ.ಎಸ್., ದಿನೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
2021ನೇ ವರ್ಷದಲ್ಲಿ ನಿವೃತ್ತಿಯಾದ ನೌಕರರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ತೀರ್ಥರಾಮ ಎಸ್ ವಳಂಬ್ರರವರು ವರದಿ ವಾಚಿಸಿದರು. ಅಧ್ಯಕ್ಷ ಮಂಜುನಾಥ್‌ರವರು ಸ್ವಾಗತಿಸಿದರು. ಸಂಘದ ಖಜಾಂಜಿ ಮಹೇಶ್ ಪಿ.,ಲೆಕ್ಕಪತ್ರ ಮಂಡಿಸಿದರು.

ನೂತನ ಸದಸ್ಯರ ಘೋಷಣೆ:
ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್‌ನ ೨೦೨೨-೨೩ನೇ ಸಾಲಿಗೆ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಚುನಾವಣಾಧಿಕಾರಿಯಾದ ರವಿಕುಮಾರ್‌ರವರು ಸಭೆಯಲ್ಲಿ ಘೋಷಿಸಿದರು. ಸುಬ್ರಾಸ್ ಆರ್.ಎಂ., ತೀರ್ಥರಾಮ ಎಸ್., ಮಹೇಶ್ ಪಿ., ಶೇಷಪ್ಪ ನಾಕ್, ಪದ್ಮನಾಭ, ಸುನೀಲ್‌ಕುಮಾರ್, ನವೀನ್ ಕುಮಾರ್‌ರವರು ಯೂನಿಯನ್ ಸದಸ್ಯರಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here