ಬಾಳಿಲ ಗ್ರಾಮ ಪಂಚಾಯತ್ ಜಮಾಬಂದಿ

0

 

ಬಾಳಿಲ ಗ್ರಾಮ ಪಂಚಾಯತ್ ನ 2021-2022 ನೇ ಸಾಲಿನ ಜಮಾಬಂಧಿಯು ಸೆ.17 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಚಾಕೊಟೆಡ್ಕ ಅಧ್ಯಕ್ಷತೆ ವಹಿಸಿದ್ದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನ ಜಮಾಬಂಧಿ ಅಧಿಕಾರಿಯಾಗಿದ್ದರು.
ಪಂಚಾಯತ್ ಕಾರ್ಯದರ್ಶಿ ಜಯಶೀಲ ರೈ ವರದಿ ಮಂಡಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ರೈ ಟಪ್ಪಾಲುಕಟ್ಟೆ, ಹರ್ಷ ಭಟ್, ಆನಂದ,ತಾರಾನಾಥ ಕಾಂಚೋಡು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿ.ಡಿ.ಒ ಹೂವಪ್ಪ ಗೌಡ ರವರು ಸ್ವಾಗತಿಸಿ,ವಂದಿಸಿದರು.
ನಂತರ ಕಾಮಗಾರಿಗಳ ವೀಕ್ಷಣೆ ನಡೆಯಿತು.
ಕೋಚೋಡು ಬಸ್ಟೇಂಡ್, ಇಂದ್ರಾಜೆ ಫ್ಯಾಕ್ಟರಿ ಸಮೀಪ ಒಣಕಸ ಶೆಡ್, ರಸ್ತೆ ಕಾಂಕ್ರೀಟೀಕರಣವನ್ನು ವೀಕ್ಷಿಸಲಾಯಿತು.

LEAVE A REPLY

Please enter your comment!
Please enter your name here