ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಸಂಭ್ರಮ- ಧಾರ್ಮಿಕ ಸಭೆ – ದೇವರ ದರ್ಶನ ಬಲಿ ಉತ್ಸವ

0

  • ಕಲ್ಯಾಣ ಮಂಟಪ ನಿರ್ಮಾಣದ ಯೋಜನೆ – ವೆಂಕಪ್ಪ ಗೌಡ ಮಾಚಿಲ

ಕಾಣಿಯೂರು: ದೇವಸ್ಥಾನದಲ್ಲಿ ನಡೆಯುವಂತಹ ಪ್ರತಿಯೊಂದು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಊರಿನವರ ಪ್ರೋತ್ಸಾಹಗಳು ಅಗತ್ಯವಾಗಿರುತ್ತದೆ. ಈ ವರ್ಷದ ಆಡಳಿತ ಪಂಗಡಗಳ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣದ ಯೋಜನೆಯಿದ್ದು, ಎಲ್ಲರ ಸಹಕಾರದಿಂದ ಆಗಬೇಕಾಗಿದೆ ಎಂದು ಮಾಚಿಲ ಕುಂಬ್ಲಾಡಿ ಉಳ್ಳಾಲ್ತಿ ಮೂಲ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ ಹೇಳಿದರು. ಅವರು ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಜ ೨೮ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಊರ, ಪರವೂರ ಭಕ್ತಾಧಿಗಳ ಸತತ ಸಹಕಾರದಿಂದ ಕ್ಷೇತ್ರವು ಅಭಿವೃದ್ಧಿಗೊಳ್ಳುತ್ತಿದೆ. ಕೂಡುಕಟ್ಟಿನವರು, ಆಡಳಿತ ಪಂಗಡ ಮತ್ತು ಎಲ್ಲರ ಸಹಕಾರದಿಂದ ಶ್ರೀ ದೇವರ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವವು ಯಶಸ್ವಿಯಾಗಿ ಸಂಭ್ರಮದಿಂದ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿಯೂ ದೇವಸ್ಥಾನದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ದೇವಸ್ಥಾನದ ಆಡಳಿತ ಮೊಕ್ತೇಸರ ನಾರ್ಣಪ್ಪ ಗೌಡ ಮಾಚಿಲ. ಕ್ಷೇತ್ರದ ಕ್ಷೇತ್ರಶರಾದ ಮಾಚಿಲ ಪೆರ್ಗಡೆ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜತ್ತಪ್ಪ ಗೌಡ ಉದ್ಲಡ್ಡ, ಪ್ರಕಾಶ್ ಅರುವಗುತ್ತು, ಸುಲೋಚನಾ ಮೀಯೊಳ್ಪೆ, ಸುಮಲತಾ ದೇವಸ್ಯ, ಕಿನ್ನಿಗ ಓಡದಕರೆ, ಕಾಣಿಯೂರು ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಕೊಪ್ಪ, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಗಂಗಮ್ಮ ಗುಜ್ಜರ್ಮೆ, ಆಡಳಿತ ಪಂಗಡಗಳ ಸಂಚಾಲಕ ಹರಿಯಪ್ಪ ಗೌಡ ಖಂಡಿಗ, ಉಪ ಸಂಚಾಲಕ ನೋಣಪ್ಪ ಗೌಡ ಕುಂಬ್ಲಾಡಿ, ಕಾರ್ಯದರ್ಶಿ ರಾಜೇಶ್ ಗೌಡ ಅಗತ್ತಬೈಲು, ಜತೆ ಕಾರ್ಯದರ್ಶಿ ಸೀತಾರಾಮ ಕೊಪ್ಪ, ಕೋಶಾಧಿಕಾರಿ ಜನಾರ್ದನ ನಾಣಿಲ ಉಪಸ್ಥಿತರಿದ್ದರು. ಜಯಂತ ಅಂಬುಲ ಸ್ವಾಗತಿಸಿ, ವಿಜಿತ್ ಮಾಚಿಲ ವಂದಿಸಿದರು. ಮಾಧವ ಕೆ.ವಿ. ಕರಂದ್ಲಾಜೆ ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನ: ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ 2021-22ನೇ ಸಾಲಿನ ಆಡಳಿತ ಪಂಗಡದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಡಳಿತ ಪಂಗಡಗಳ ಸಂಚಾಲಕ ಹರಿಯಪ್ಪ ಗೌಡ ಖಂಡಿಗ, ಉಪ ಸಂಚಾಲಕ ನೋಣಪ್ಪ ಗೌಡ ಕುಂಬ್ಲಾಡಿ, ಕಾರ್ಯದರ್ಶಿ ರಾಜೇಶ್ ಗೌಡ ಅಗತ್ತಬೈಲು, ಜತೆ ಕಾರ್ಯದರ್ಶಿ ಸೀತಾರಾಮ ಕೊಪ್ಪ, ಕೋಶಾಧಿಕಾರಿ ಜನಾರ್ದನ ನಾಣಿಲ ಸನ್ಮಾನ ಸ್ವೀಕರಿಸಿದರು.

ದೇವರ ದರ್ಶನ ಬಲಿ ಉತ್ಸವ..
ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಜ ೨೮, ೨೯ರಂದು ನಡೆಯಿತು. ಜ ೨೮ರಂದು ಪೂರ್ವಾಹ್ನ ಪೂರ್ವಾಹ್ನ ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, ನಾಲ್ಕಂಬ ಉಳ್ಳಾಲ್ತಿ ಕ್ಷೇತ್ರದಲ್ಲಿ ಪ್ರಾರ್ಥನೆ, ದೇವಳದಲ್ಲಿ ತೋರಣ ಮುಹೂರ್ತ, ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಸಾಯಂಕಾಲ ತಂತ್ರಿ ಪರಿವಾರದವರ ಆಗಮನ- ಸ್ವಾಗತ, ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವೈದಿಕ ಕಾರ್ಯಕ್ರಮ, ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು, ರಾಕ್ಷೆಘ್ನ ಹೋಮ, ವಾಸ್ತು ಬಲಿ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು. ಜ ೨೯ರಂದು ಪೂರ್ವಾಹ್ನ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಪ್ರಸಾದ ವಿತರಣೆ, ದೇವರ ಕೆರೆಯಿಂದ ಪವಿತ್ರಜಲ ತರುವುದು, ಉಳ್ಳಾಲ್ತಿ ಸನ್ನಿಧಿಯಲ್ಲಿ ಕಲಶಪೂಜೆ, ವ್ಯಾಘ್ರ ಚಾಮುಂಡಿ ಸನ್ನಿಧಿಯಲ್ಲಿ ಕಲಶಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಶ್ರೀ ದೇವರ ಭೂತ ಬಲಿ, ನೃತ್ಯ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನಾಲ್ಕಂಬ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಿತು.

LEAVE A REPLY

Please enter your comment!
Please enter your name here