ಬೆಟ್ಟಂಪಾಡಿಯಲ್ಲಿ ಸಂಜೀವಿನಿ ಸಂತೆ

0

  • ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮತ್ತು ಶ್ರೀ ಕೃಪಾ ಹಾಗೂ ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ 75 ನೇ ಅಜಾದ್ ಕಾ ಅಮೃತ  ಮಹೋತ್ಸವ
  • ಶಾಶ್ವತವಾದ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಆಗಲಿ- ಎನ್.ಎಸ್. ಮಂಜುನಾಥ
 ನಿಡ್ಪಳ್ಳಿ;ಜನರು ಒಳ್ಳೆಯ ಬದುಕು ಕಟ್ಟಿ ಕೊಳ್ಳಲು, ಆರೋಗ್ಯವಂತ ಜೀವನ ನಡೆಸಲು ಇಲ್ಲಿ ಒಂದು ಶಾಶ್ವತ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಆಗಲಿ ಎಂದು ನೋಟರಿ ವಕೀಲ, ಪುತ್ತೂರು ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್.ಮಂಜುನಾಥ ನುಡಿದರು.   ಅವರು ನಿಡ್ಪಳ್ಳಿ ಮತ್ತು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮತ್ತು ಶ್ರೀ ಕೃಪಾ ಹಾಗೂ ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ 75 ನೇ ಅಜಾದ್ ಕಾ ಅಮೃತ ಮಹೋತ್ಸವದ ಅಂಗವಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವಠಾರದ ಅಶ್ವಥ  ಮರದಡಿಯಲ್ಲಿ ಜ.31 ರಂದು  ಸಂಜೀವಿನಿ ಸಂತೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಪೂರ್ವಜರ ಕಾಲದಲ್ಲಿ ಶಾಲೆ, ಮೊಕದ್ದಮೆ ತೀರ್ಪು ಸೇರಿದಂತೆ ಎಲ್ಲಾ ಚಟುವಟಿಕೆಗಳು ಒಂದು ಮರದಡಿಯಲ್ಲಿ   ನಡೆಯುತ್ತಿತ್ತು. ಹಾಗೆಯೇ ಇಂದು ಈ ಮರದಡಿಯಲ್ಲಿ ಉದ್ಘಾಟನೆ ಗೊಂಡ ಸಂತೆ ಮುಂದೆ ಸುಸಜ್ಜಿತ ಕಟ್ಟಡ ನಿರ್ಮಾಣದೊಂದಿಗೆ ಮಾರುಕಟ್ಟೆ ನಿರ್ಮಾಣವಾಗಲಿ.ಇದಕ್ಕೆ ಪುತ್ತೂರು ಎಪಿಎಂಸಿಯಿಂದ ಎಲ್ಲಾ ಸಹಕಾರ ನೀಡಲಾಗುವುದು. ಇಲ್ಲಿ ಜಾಗ ನೀಡಿದರೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ನಾವು ಅನುದಾನ ಒದಗಿಸಲು ಬದ್ದ ಎಂದು ಹೇಳಿ ತಾವೆ ಸ್ವತಃ ಬೆಳೆದು ಪ್ರತಿ ಮನೆಯಿಂದ ಸಂತೆಗೆ ತರಕಾರಿ ತಂದು ಮಾರಿ ಸ್ವಾವಲಂಬಿ ಜೀವನ ನಡೆಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
   * ನರೇಗಾದಲ್ಲಿ ಹಳ್ಳಿ ಸಂತೆ ನಿರ್ಮಾಣಕ್ಕೆ ಅವಕಾಶ- ಶೈಲಜಾ ಭಟ್
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾತನಾಡಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಂಜೀವಿನಿ ಸಂತೆ ಸಹಕಾರಿಯಾಗಲಿ. ತಾವು ಸಾವಯವ ಕೃಷಿಯಿಂದ ಆಹಾರ ಪದಾರ್ಥಗಳನ್ನು ಬೆಳಿಸಿದರೆ ತಮ್ಮ ಅರೋಗ್ಯ ಕಾಪಾಡುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ನರೇಗಾದಲ್ಲಿ ಹಳ್ಳಿ ಸಂತೆ ನಿರ್ಮಾಣ ಮಾಡಲು ಅವಕಾಶ ಇದ್ದು ಇಲ್ಲಿ ಜಾಗ ಇದ್ದರೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳ ಬಹುದು ಎಂದು ಹೇಳಿ ಶುಭ ಹಾರೈಸಿದರು.
 *  ಸ್ವ ಉದ್ಯೋಗ ಮಾಡಲು ಉತ್ತಮ ಅವಕಾಶ- ಜಗತ್
ಸಂಜೀವಿನಿ ತಾಲೂಕು ವ್ಯವಸ್ಥಾಪಕ ಜಗತ್ ಮಾತನಾಡಿ ನಮ್ಮ ಪ್ರಧಾನಿ ಆತ್ಮನಿರ್ಭರ ಭಾರತ ನಿರ್ಮಾಣ ಆಗಬೇಕು ಎಂದು ಹೇಳಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.ಮಹಿಳೆಯರನ್ನು ಒಟ್ಟು ಸೇರಿಸಿ ‍‍ಗುಂಪುರಚಿಸಿ ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ಮಾಡಿ ಸ್ವ ಉದ್ಯೋಗ ಮಾಡಲು ಉತ್ತಮ ಅವಕಾಶ ಇದೆ.ಆ ನಿಟ್ಟಿನಲ್ಲಿ ಜೀವನೋಪಾಯಕ್ಕಾಗಿ ಮತ್ತು ಆರೋಗ್ಯ ಕಾಪಾಡಲು ಇದು ಸಹಕಾರಿ ಎಂದು ಹೇಳಿದರು.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ.ಡಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನೋದ್ ರೈ ಗುತ್ತು ಮಾತನಾಡಿ ಮಹಿಳೆಯರು ಹೆಚ್ಚು ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳಲು ಹೇಳಿ ಶುಭ ಕೋರಿದರು. ಬೆಟ್ಟಂಪಾಡಿ ಅಧ್ಯಕ್ಷೆ ಪವಿತ್ರ. ಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಬೆಟ್ಟಂಪಾಡಿ ಗ್ರಾಮಕರಣಿಕ ಕನಕರಾಜ್, ನಿಡ್ಪಳ್ಳಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಆಶಾಲತಾ.ಕೆ, ಕಾರ್ಯದರ್ಶಿ ಅನಿತಾ ಕುವೆಂಜ ಹಾಗೂ ಸರ್ವ ಸದಸ್ಯರು, ಬೆಟ್ಟಂಪಾಡಿ ಒಕ್ಕೂಟದ ಅಧ್ಯಕ್ಷೆ ಆಶ್ವಿನಿ, ಕಾರ್ಯದರ್ಶಿ ಜಾನಕಿ ಹಾಗೂ ಸರ್ವ ಸದಸ್ಯರು,ಮುಖ್ಯ ಪುಸ್ತಕ ಬರಹಗಾರರಾದ ಚೈತ್ರ ಬೆಟ್ಟಂಪಾಡಿ, ಭವ್ಯಾ ನಿಡ್ಪಳ್ಳಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭಾರತಿ ನಿಡ್ಪಳ್ಳಿ, ಶಾಲಿನಿ.ಕೆ ಹಾಗೂ ಬೆಟ್ಟಂಪಾಡಿ ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು.
ಕು.ಲಾವಣ್ಯ ಪ್ರಾರ್ಥಿಸಿ,ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಪಿಡಿಒ ಸಂದೇಶ್ ಸ್ವಾಗತಿಸಿದರು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಪಿಡಿಒ ಸಂಧ್ಯಾಲಕ್ಷ್ಮೀ ವಂದಿಸಿದರು.ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಬಾಬು ನಾಯ್ಕ, ಸಿಬ್ಬಂದಿ ಸಂದೀಪ್ ಸಹಕರಿಸಿದರು.
ಪ್ರಥಮ ಖರೀದಿ- ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ ಮತ್ತು ಸಂತೆ ಉದ್ಘಾಟಿಸಿದ ಎನ್.ಎಸ್.ಮಂಜುನಾಥ ದಂಪತಿಗಳು  ಪ್ರಥಮ ಖರೀದಿ ಮಾಡಿ ಸಂತೆಗೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here