ಪಂಜ: ಶ್ರೀ ಶಾರದೋತ್ಸವ 2022 ಆಮಂತ್ರಣ ಪತ್ರಿಕೆ ಬಿಡುಗಡೆ

0

 

ಶ್ರೀ ಶಾರದಾಂಬ ಭಜನಾ ಮಂಡಳಿ ಪಂಜ, ಶ್ರೀ ಶಾರದೋತ್ಸವ ಸಮಿತಿ-2022 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವವು ಅ.5.ರಂದು ವಿವಿಧ ವೈಧಿಕ, ಧಾರ್ಮಿಕ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಪಂಜ
ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಜರಗಲಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ.20 ರಂದು ನಡೆಯಿತು.ಭಜನಾ ಮಂಡಳಿಯ ಸದಸ್ಯ ಮಹಾಲಿಂಗ ‌ಸಂಪ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಲೋಕೇಶ್ ಬರೆಮೇಲು ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉತ್ಸವ ಸಮಿತಿಯ ಪೂರ್ವಾಧ್ಯಕ್ಷ ಕೆ ಕೃಷ್ಣ ವೈಲಾಯ, ಭಜನಾ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ತೋಟ,ಉತ್ಸವ ಸಮಿತಿಯ ಉಪಾಧ್ಯಕ್ಷ ಲಿಖಿತ್ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು, ಕೋಶಾಧಿಕಾರಿ ನಾರಾಯಣ ಶೀರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು.ಕುಸುಮಾಧರ ಕೆಮ್ಮೂರು ವಂದಿಸಿದರು.ಉತ್ಸವ ಕಾರ್ಯಕ್ರಮಗಳ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here