ಚಂದಳಿಕೆ ಹಿ.ಪ್ರಾ ಶಾಲೆಯಲ್ಲಿ ವಜ್ರಮಹೋತ್ಸವ

0

  • ಮೈಸೂರು ಎಸ್ ಎಲ್ ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಮಾಲಕರು ಕೊಡುಗೆಯಾಗಿ ನೀಡಿದ ಕೊಠಡಿ ಸಹಿತ ಶಾಲಾ ಕಟ್ಟಡಗಳ ಲೋಕಾರ್ಪಣೆ
  • ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿತಾಗ ಪರಿವರ್ತನೆ ಸಾಧ್ಯ: ಮಠಂದೂರು
  • ಎಸ್.ಎಲ್.ವಿ ಹುಟ್ಟು ಕೇವಲ ವ್ಯಾಪಾರ, ಲಾಭ ಮಾಡುವ ಉದ್ದೇಶವಲ್ಲ: ದಿವಾಕರದಾಸ್ ನೇರ್ಲಾಜೆ

ವಿಟ್ಲ: ಸರ್ಕಾರಿ ಶಾಲೆಯಲ್ಲಿ ಕಲಿತವರ ಭವಿಷ್ಯ ಇಂದು ಸಮಾಜದಲ್ಲಿ ಉತ್ತಮವಾಗಿ ರೂಪುಗೊಂಡಿದೆ. ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿತಾಗ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಚಂದಳಿಕೆ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಎಸ್ ಎಲ್ ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಮೈಸೂರು ಇದರ ಮಾಲಕ, ಶಾಲಾ ಹಳೆ ವಿದ್ಯಾರ್ಥಿ ದಿವಾಕರ ದಾಸ್ ನೇರ್ಲಾಜೆರವರು ತನ್ನ ಪೋಷಕರಾದ ಇಡ್ಕಿದು ಗ್ರಾಮದ ನೇರ್ಲಾಜೆ ದಿ. ರಾಮದಾಸ್, ದಿ. ಸುಂದರಿರಾಮದಾಸ್ ರವರ ನೆನಪಿಗಾಗಿ ನೀಡಿದ ಸುಮಾರು ಎಂಟು ಲಕ್ಷ ರೂಪಾಯಿ ಮೌಲ್ಯದ ಒಂದು ಕೊಠಡಿ, ಮಂಗಳೂರು ಎಂಆರ್ ಪಿ ಎಲ್ ನ ಸಿ.ಎಸ್ ಆರ್ ಅನುದಾನದಿಂದ ೩೨ ಲಕ್ಷದ ನಾಲ್ಕು ಕೊಠಡಿ, ವಜ್ರ ಮಹೋತ್ಸವ ಸಮಿತಿ ಮತ್ತು ವಿದ್ಯಾಭಿಮಾನಿಗಳ ಸಹಕಾರದಲ್ಲಿ ಸಭಾಭವನವನ್ನು ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ದೇಶದಲ್ಲಿ ಪರಿವರ್ತನೆ ಹಳ್ಳಿಯಿಂದ ಪ್ರಾರಂಭಗೊಂಡಿದೆ. ದೇವಸ್ಥಾನದ ಕಟ್ಟಿದರೆ ಶ್ರದ್ಧೆ, ಶಾಲೆ ಕಟ್ಟಿದರೆ ಜ್ಞಾನ ವೃದ್ಧಿಯಾಗುತ್ತದೆ. ಒಂದು ಶಾಲೆ ನಿರ್ಮಾಣ ಮಾಡಿದಾಗ ದೇವಸ್ಥಾನ ನಿರ್ಮಿಸಿದ ಶೇಷ್ಠತೆ ಇದೆ. ಸರಕಾರಿ ಶಾಲೆಗಳ ಮೂಲಕಬಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಎಸ್ ಎಲ್ ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಮೈಸೂರು ಇದರ ಮಾಲಕ ದಿವಾಕರ ದಾಸ್ ನೇರ್ಲಾಜೆರವರು ನೂತನ ಕೊಠಡಿಯ ಕೀಯನ್ನು ಹಸ್ತಾಂತರ ಮಾಡಿ ಮಾತನಾಡಿ ನನ್ನ ಈ ಏಳಿಗೆಗೆ ಹಾಗೂ ನಾವು ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎನ್ನುವುದನ್ನು ಕಲಿಸಿಕೊಡುವಲ್ಲಿ ನನಗೆ ವಿದ್ಯೆ ಕಲಿಸಿದ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಎಸ್.ಎಲ್.ವಿ ಗ್ರೂಪಿನ ಹುಟ್ಟು ಕೇವಲ ವ್ಯಾಪಾರ, ಲಾಭ ಮಾಡುವ ಉದೇಶವಲ್ಲ. ವ್ಯಾಪಾರದಲ್ಲಿ ಬಂದ ಲಾಭಾಂಶದಲ್ಲಿ ಒಂದಿಷ್ಟನ್ನು ಕಳೆದ ಹನ್ನೊಂದು ವರುಷಗಳಿಂದ ಸಮಾಜ ಸೇವೆಗಾಗಿ ವಿನಿಯೋಗಿಸುತ್ತಿದ್ದೇನೆ. ಇದು ನನ್ನ ಒಬ್ಬನ ಶ್ರಮವಲ್ಲ ಇದರಲ್ಲಿ ಎಸ್.ಎಲ್.ವಿ ಗ್ರೂಪ್ಸ್ ನ ಎಲ್ಲಾ ಸಿಬ್ಬಂದಿಗಳ ಶ್ರಮವಿದೆ. ಮೂರು ಜನರಿಂದ ಸ್ಥಾಪನೆಯಾದ ನಮ್ಮ ಈ ಸಂಸ್ಥೆ ಅನೇಕರಿಗೆ ಉದ್ಯೋಗವನ್ನು ಕೊಡುವ ಮೂಲಕ ಅವರ ಬಾಳಿನಲ್ಲಿ ಬೆಳಕಾಗಿದೆ ಎಂದರು. ಶಾಲೆಯ ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲಿ ನಾನಿದ್ದೇನೆ ಎನ್ನುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಲೋಕೇಶ್ ರೈ ಕೊಲ್ಯ ಅವರಿಂದ ಕಂಪ್ಯೂಟರ್ ಲೋಕಾರ್ಪಣೆಗೊಳಿಸಲಾಯಿತು. ಸಿಪಿಸಿಆರ್ ಐ ಹಿರಿಯ ವಿದ್ಯಾರ್ಥಿಗಳ ಬಳಗ 60 ಸಾವಿರ ರೂ. ವೆಚ್ಚದ ಇನ್ವರ್ಟರ್ ಮತ್ತು ಶಾಲಾಭಿವೃದ್ಧಿ ಸಮಿತಿ ವತಿಯಿಂದ ನೀಡಲಾದ ದೀಪ ವನ್ನು ಉದ್ಘಾಟಿಸಲಾಯಿತು.

ಎಸ್ ಎಲ್ ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಮೈಸೂರು ಇದರ ಮಾಲಕ ದಿವಾಕರ ದಾಸ್ ನೇರ್ಲಾಜೆ, ದೇಜಪ್ಪ ಪೂಜಾರಿ ನಿಡ್ಯ, ಗಿರಿಯಪ್ಪ ಗೌಡ, ಭವಾನಿ ಟೀಚರ್, ಉದ್ಯಮಿ ಸುಬ್ರಾಯ ಪೈ, ನಾರಾಯಣ ಗೌಡ, ವಿಶ್ವನಾಥ ಗೌಡ, ಶ್ರೀನಿವಾಸ್ ಚಂದಳಿಕೆ, ಮೋಹನ್ ಕಾಯಾರ್ ಮಾರ್, ಸಂಜೀವ ಪೂಜಾರಿ, ಪುಷ್ಪಲತಾ, ಶಿವಾನಂದ ರೈ, ನಾರಾಯಣ ಪೂಜಾರಿ ಮೊದಲಾದವರನ್ನು ಸನ್ಮಾನಿಸಲಾಯಿತು.

ಎಂಆರ್ ಪಿ ಎಲ್ ಸಂಸ್ಥೆಯ ವಿಜಯೇಂದ್ರ, ಪಟ್ಟಣ ಪಂಚಾಯತ್ ಸದಸ್ಯರಾದ ರವಿಪ್ರಕಾಶ್, ರಕ್ಷಿತಾ ಸನತ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಲಯನ್ಸ್ ಕ್ಲಬ್ ನ ಸದಸ್ಯೆ ಪುಷ್ಪಲತಾ, ಶಿಕ್ಷಕ ನಾರಾಯಣ ಗೌಡ, ವಿದ್ಯಾ ವರ್ದಕ ಸಂಘ ಕಾರ್ಯಾಧ್ಯಕ್ಷ ಶ್ರೀನಿವಾಸ ಚಂದಳಿಕೆ, ಉದ್ಯಮಿ ಸುಬ್ರಾಯ ಪೈ, ನಿವೃತ್ತ ಶಿಕ್ಷಕಿ ಭವಾನಿ ರೈ ಕೊಲ್ಯ, ದೇಜಪ್ಪ ಪೂಜಾರಿ ನಿಡ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಶಾಂತ್ ಸಾಲ್ಯಾನ್ ವಂದಿಸಿದರು. ಸುಧಾ ಶೆಟ್ಟಿ ಉಜಿರೆಮಾರ್ ಮತ್ತು ಗೀತಾ ಕಾಯಾರ್ ಮಾರ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ವಿಶ್ವನಾಥ ಸ್ವಾಗತಿಸಿದರು.

LEAVE A REPLY

Please enter your comment!
Please enter your name here