ಮಂಗಳೂರಿನ ಅರ್ಥ ಹೋಂಡಾ ಕಾರಿನ ನೂತನ ಶಾಖೆ ಪುತ್ತೂರಿನಲ್ಲಿ ಆರಂಭ

0

ಪುತ್ತೂರು : ಪ್ರತಿಷ್ಠಿತ ಹೋಂಡಾ ಕಂಪೆನಿಯಾ ಕಾರುಗಳ ಅಧಿಕೃತ ಡೀಲರ್ ,ಮಂಗಳೂರು ಕದ್ರಿ ರಸ್ತೆ ಯುನೈಟೆಡ್ ಟವರ್ಸ್ನಲ್ಲಿ ಕಾರ್ಯಚರಿಸುತ್ತಿರುವ ,ಕಳೆದ 2 ವರುಷಗಳಲ್ಲಿ ಕಾರು ಪ್ರಿಯರ ಮನ ಗೆದ್ದಿರುವ ಅರ್ಥ ಹೋಂಡಾವೂ ,ಗ್ರಾಹಕರಿಗೆ ಇನ್ನಷ್ಟೂ ಗುಣಮಟ್ಟ ವುಳ್ಳ ಸೇವೆ ಒದಗಿಸೋ ಸಲುವಾಗಿ ನೂತನ ಶಾಖೆಯನ್ನು ಬಪ್ಪಳಿಗೆ ಬೈಪಾಸ್ ರಸ್ತೆ , ಅಶ್ಮಿ ಕಂಫರ್ಟ್ಸ್ ಇಲ್ಲಿ ಫೆ.2ರಂದು ಆರಂಭಿಸಿದೆ.


ಅರ್ಚಕ ಮುರಳೀಧರ ಬಡೆಕ್ಕಿಲಾಯ ಪೂಜಾಕೈಂಕರ್ಯ ನೆರವೇರಿಸೋ ಮೂಲಕ ಸಂಸ್ಥೆಯ ಅಭಿವೃಧ್ಧಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ,ಅಶ್ಮಿ ಕಂಫರ್ಟ್ಸ್ ಮಾಲಕ ಸಂತೋಷ್ ಕುಮಾರ್ ಶೆಟ್ಟಿ ,ಮಾನಸ ಒಪ್ಟಿಕಲ್ಸ್ ಮಾಲಕ ಪ್ರಸಾದ್, ಅರ್ಥ ಹೋಂಡಾ ಸಂಸ್ಥೆ ಜನರಲ್ ಮ್ಯಾನೇಜರ್ ಗಣೇಶ್ ಪ್ರಸಾದ್ , ಎಜಿಎಂ ದೀಪಕ್ ಕೋಟ್ಯಾನ್, ಅಕೌಂಟ್ಸ್ ಮ್ಯಾನೇಜರ್ ಸಂಪತ್ ಕುಮಾರ್, ನೂತನ ಶಾಖೆಯ ಬ್ರಾಂಚ್ ಹೆಡ್ ಪ್ರಕಾಶ್ .ಎಂ ಸಹಿತ ಹಲವರು ಇದ್ದರು. ಜಿ.ಎಂ.ಗಣೇಶ್ ಪ್ರಸಾದ್ ಮಾತನಾಡಿ ,ಕಳೆದ ಎರಡು ವರ್ಷದಿಂದ ಗ್ರಾಹಕ ಬಂಧುಗಳ ಮನಗೆದ್ದಿರುವ ಅರ್ಥ ಹೋಂಡಾ ನೂತನ ಶಾಖೆಯನ್ನು ಪುತ್ತೂರಿನಲ್ಲಿ ಆರಂಭಿಸಿದೆ. ತಿಂಗಳ ಎರಡನೇ ಶನಿವಾರದಂದು ಇಲ್ಲಿ ಸರ್ವಿಸ್ ಕ್ಯಾಂಪ್ ಇರಲಿದ್ದು ,ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿ ಸಹಕಾರ ಯಾಚಿದರು. ಎಜಿಎಂ ದೀಪಕ್ ಕೊಟ್ಯಾನ್ ಮಾತನಾಡಿ ,ಹೆಚ್ಚು ,ಹೆಚ್ಚು ಸೇವೆ ಕೊಡೋ ಕಾರಣಕ್ಕಾಗಿ ನೂತನ ಶಾಖೆ ಆರಂಭಿಸಿದ್ದೇವೆ. ಎಲ್ಲಾ ಮಾದರಿಯಾ ಹೋಂಡಾ ಕಾರುಗಳ ಮೇಲೆ ಸುಮಾರು 50 ಸಾವಿರವರೆಗಿನ ಕೊಡುಗೆಯಿದ್ದು ,ಗ್ರಾಹಕರೂ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.

ಪ್ರಥಮ ಗ್ರಾಹಕರಿಗೆ ಕೀ ಹಸ್ತಾಂತರ…..
ಐರಿಲ್ ನಿಶಾ ಪಿಂಟೋ ಕುಟುಂಬ ವರ್ಗ ಕ್ಕೆ ನೂತನ ಕಾರಿನ ಕೀಲಿಯನ್ನು ಬ್ರಾಂಚ್ ಹೆಡ್ ಪ್ರಕಾಶ್ ಹಸ್ತಾಂತರಿಸಿ ,ಅಭಿನಂದಿಸಿ ,ಹಾರೈಸಿದರು.
ವಿವರಗಳಿಗಾಗಿ 9606048736 ಸಂಖ್ಯೆ ಯನ್ನು ಸಂಪರ್ಕಿಸ ಬಹುದು.

LEAVE A REPLY

Please enter your comment!
Please enter your name here