ಅರಂತೋಡು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಆಯುಷ್ಮಾನ್ ಆಭಾ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮ

0

 

ಗ್ರಾಮ ಪಂಚಾಯತ್ ಅರಂತೋಡು ಮತ್ತು ಗ್ರಾಮ ಒನ್ ನಾಗರಿಕ ‌ಸೇವಾ ಕೇಂದ್ರ ಅರಂತೋಡು ಇದರ ಆಶ್ರಯದಲ್ಲಿ ಆಯುಷ್ಮಾನ್ ಆಭಾ ಕಾರ್ಡಿನ ಉಚಿತ ನೋಂದಣಿ ಕಾರ್ಯಕ್ರಮವು ಅರಂತೋಡು ಬ್ಯಾಂಕ್ ಆಫ್ ಬರೋಡದ ಬಳಿ ಇರುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಸೆ.22ರಂದು ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಹರಿಣಿ ದೇರಾಜೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸ್ವಾಗತಿಸಿ, ಅ.ಭಾ ಕಾರ್ಡ್ ನ ಪ್ರಯೋಜನದ ಸಂಕ್ಷಿಪ್ತವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶ್ವೇತಾ ಅರಮನೆಗಯ, ಗ್ರಾ.ಪಂ ಸದಸ್ಯ ಶಿವಾನಂದ ಕುಕ್ಕಂಬಳ, ಮಾಜಿ ಜಿ.ಪಂ ಸದಸ್ಯ ಸತೀಶ್ ನಾಯ್ಕ್, ಮಾಜಿ ಗ್ರಾ.ಪಂ ಉಪಾಧ್ಯಕ್ಷ ಆಶ್ರಫ್ ಗುಂಡಿ, ಸುದ್ದಿ ವರದಿಗಾರ ಕೃಷ್ಣ ಬೆಟ್ಟ, ಪಂಚಾಯತ್ ಸಿಬ್ಬಂದಿ ವರ್ಗ, ಮಿಥಿಲಾ ಟ್ರೇಡರ್ಸ್ ನ ಸಿಬ್ಬಂದಿ ಉಪಸ್ಥಿತಿರಿದ್ದರು.


ಗ್ರಾಮ ಒನ್ ಪ್ರತಿನಿಧಿ ಮಂಜುನಾಥ ಪೈ ಅರಂಬೂರು ನೋಂದಣಿ ಕಾರ್ಯಕ್ರಮ ನಡೆಸಿಕೊಟ್ಟರು, ಮಧುಕೃಷ್ಣ ಕಾಯರ್ತೋಡಿ ಸಹಕರಿಸಿದರು.

LEAVE A REPLY

Please enter your comment!
Please enter your name here