ಒಳಮೊಗ್ರು ಗ್ರಾಮಸ್ಥರ ಬಹುವರ್ಷದ ಎರಡು ಬೇಡಿಕೆ ಈಡೇರಿತು; ಶಾಸಕರಿಂದ ಎರಡೂ ಕಾಮಗಾರಿಗೆ ಶಂಕುಸ್ಥಾಪನೆ

0

  • ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ, ಜನರ ಬೇಡಿಕೆ ಈಡೇರಿಸಲು ಶತಪ್ರಯತ್ನ : ಶಾಸಕ ಮಠಂದೂರು

ಪುತ್ತೂರು: ಒಳಮೊಗ್ರು ಗ್ರಾಮದ ಜನತೆಗೆ ಫೆ.4 ಶುಭ ಶುಕ್ರವಾರ, ಯಾಕೆಂದರೆ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆ ಈಡೇರಿದ ಸಂತಸದಲ್ಲಿ ಬೆಳ್ಳಂಬೆಳಗ್ಗೆಯೇ ಗ್ರಾಮಸ್ಥರು ಕುಂಬ್ರ ಕೆಪಿಎಸ್ ಸ್ಕೂಲ್ ಬಳಿ ಜಮಾಯಿಸಿದ್ದರು. ಸ್ಕೂಲ್ ಬಳಿ ಒಳಮೊಗ್ರು ಗ್ರಾಪಂನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯುವುದಿತ್ತು. ಅದೇ ರೀತಿ ಕೈಕಾರದಲ್ಲಿ ಕಸವಿಲೇವಾರಿ ಘಟಕದ ಶಂಕುಸ್ಥಾಪನೆಯನೆಯೂ ಒಂದೇ ದಿನ ನಡೆಸಲು ಶಾಸಕರು ತೀರ್ಮಾನಿಸಿದ್ದರು.

 

ಗ್ರಾಪಂನ ನೂತನ ಕಟ್ಟಡಕ್ಕೆ ಶಾಸಕ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ಆ ಬಳಿಕ ಮಾತನಾಡಿದ ಅವರು ತನ್ನ ಕ್ಷೇತ್ರದ ಪ್ರತೀಯೊಂದು ಗ್ರಾಮವೂ ಅಭಿವೃದ್ದಿಯಾಗಬೇಕೆಂಬ ಉದ್ದೇಶದಿಂದ ಗ್ರಾಮಾಂತರ ಭಾಗದ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಗ್ರಾಮಗಳು ಉನ್ನತಿ ಅದು ದೇಶದ ಉನ್ನತಿಗೆಗೆ ಕಾರಣವಾಗುತ್ತದೆ. ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಗೆ ಒಂದೇ ದಿನ ಶಿಲಾನ್ಯಾಸ ನೆರವೇರಿಸಲಾಗಿದ್ದು ಗ್ರಾಮಸ್ಥರಿಗೆ ಅಚ್ಚೇದಿನ್ ಬಂದಿದೆ ಎಂದು ಹೇಳಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೨೮ ಲಕ್ಷ ರೂ ವೆಚ್ಚದ ಎರಡು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಮುಂದಿನ ವರ್ಷಇದು ಜನರ ಉಪಯೋಗಕ್ಕೆ ಸಿದ್ದವಾಗಲಿದೆ. ಗ್ರಾಮೀಣ ರಸ್ತೆಗಳು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರದ ಹಲವು ಗ್ರಾಮಗಳ ಒಳರಸ್ತೆಗಳ ಅಭಿವೃದ್ದಿಗೆ ಅನುದಾನವನ್ನು ಒದಗಿಸಲಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು. ಯಾವ ಗ್ರಾಮದ ಯಾವುದೇ ರಸ್ತೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅಭಿವೃದ್ದಿಯೊಂದೇ ಮೂಲಮಂತ್ರವಾಗಿದ್ದು ಜನರ ಸಹಕಾರದಿಂದ ಕ್ಷೇತ್ರ ಪೂರ್ಣ ಅಭಿವೃದ್ದಿಗೆ ಶತಪ್ರಯತ್ನ ಮಾಡುವುದಾಗಿ ಹೇಳಿದರು.

ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರ ಬಹುವರ್ಷದ ಬೇಡಿಕೆ ಈ ಬಾರಿ ಈಡೇರಿದೆ ಎಂಬ ಸಂತಸ ಪ್ರತೀಯೊಬ್ಬ ಗ್ರಾಮಸ್ಥರಲ್ಲೂ ಇದೆ ಕಟ್ಟಡ ನಿರ್ಮಾಣ ಮಾಡುವಲ್ಲಿ ಸಹಕರಿಸಿದ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಆದುನಿಕ ಸೌಲಭ್ಯವುಳ್ಳ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಯೂ ಒಂದೇ ಸೂರಿನಡಿ ಗ್ರಾಮಸ್ಥರಿಗೆ ಲಭ್ಯವಾಗಲಿದೆ ಎಂದು ಹೇಳಿದರು.

ಕಸವಿಲೇವಾರಿ ಘಟಕ ಸ್ವಚ್ಚಸಂಕೀರ್ಣಕ್ಕೆ ಶಿಲಾನ್ಯಾಸ
ರಾಷ್ಟ್ರೀಯ ಸ್ವಚ್ಚಭಾರತ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು ೧೫ ಲಕ್ಷ ರೂ ವೆಚ್ಚದಲ್ಲಿ ಒಳಮೊಗ್ರು ಗ್ರಾಮದ ಕೈಕಾರದಲ್ಲಿ ನಿರ್ಮಾಣವಾಗುತ್ತಿರುವ ಕಸವಿಲೇವಾರಿ ಘಟಕ ಸ್ವಚ್ಚ ಸಂಕೀರ್ಣಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧಿಜಯಂತಿಯದಂದು ಒಂದು ದಿವಸ ಮಾತ್ರ ಮಾತ್ರ ಸ್ವಚ್ಚ ಮಾಡಿ ಮರೆಯುವ ಕೆಲಸವಾಗುತ್ತಿತ್ತು. ಆದರೆ ಮೋಧಿಪ್ರಧಾನಿಯಾದ ಬಳಿಕ ಸ್ವಚ್ಚಭರತ್‌ಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಕಸವಿಲೇವಾರಿ ಘಟಕದ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತದೆ. ಆರೋಗ್ಯ ಯುತ ಸಮಾಜ ನಿರ್ಮಾಣಕ್ಕೆ ಆಧ್ಯತೆ ನೀಡಲಗುತ್ತದೆ. ಪ್ರತೀ ಗ್ರಾಪಂನಲ್ಲೂ ಕಸವಿಲೇವಾರಿ ಘಟಕ ನಿರ್ಮಾಣವಾದರೆ ಆ ಗ್ರಾಪಂ ಮಾದರಿ ಗ್ರಾಪಂ ಎನಿಸುತ್ತದೆ. ಪ್ಲಾಸ್ಟಿಕ್ ಮುಕ್ತ ನಿರ್ಮಾಣವಾಗುವಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದ ಅವರು ಮಾರಕವಾದ ಕಸದಿಂದ ರಸ ತೆಗೆಯುವ ಕೆಲಸ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

20 ಲಕ್ಷದ ಘಟಕ ನಿರ್ಮಾಣವಾಗಲಿದೆ. ಕಾರಣಾಂತರಗಳಿಂದ ಶಿಲಾನ್ಯಾಸ ತಡವಾಗಿತ್ತು. ಯೋಜನೆ ಯಶಸ್ವಿಯಾಗಲಿ ಎಂದು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಶುಭ ಹಾರೈಸಿದರು.

ಕಸ ಎಲ್ಲಿಹಾಕಬೇಕೆಂದು ಕೇಳುವವರಿಗೆ ಉತ್ತರ ಸಿಕ್ಕಂತಾಗಿದೆ. ಒಳಮೊಗ್ರು ಗ್ರಾಮದ ಕಸವನ್ನು ಎಲ್ಲಿ ಹಾಕಬೇಕು ಎಂಬ ಪ್ರಶ್ನೆ ಪ್ರತೀಯೊಬ್ಬರಲ್ಲೂ ಇತ್ತು ಇದೀಗ ಆ ಪ್ರಶ್ನೆಗೆ ಪರಿಹಾರ ಸಿಕ್ಕಿದೆ. ಸ್ಥಳೀಯ ಜನರ ಸಹಕಾರದಿಂದ ನಮಗೆ ಇಲ್ಲಿ ಘಟಕ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಈ ಯೋಜನೆ ಯಶಸ್ವಿಯಾಗಲಿ . ಗ್ರಾಮದ ಕಸ ವಿಲೇವಾರಿ ಸಮಸ್ಯೆ ಪೂರ್ಣವಾಗಿ ಪರಿಹಾರವಾಗಲಿ ಎಂದು ಶುಭ ಹಾರೈಸಿದರು.

೨೦೦೦ ಚ.ಅಡಿಯ ಕಟ್ಟಡ ನಿರ್ಮಾಣವಾಗಲಿದೆ. ಇದಕ್ಕಾಗಿ ೧೫ ಲಕ್ಷ ವ್ಯಯಿಸಲಾಗುತ್ತದೆ. ಒಟ್ಟು 20 ಲಕ್ಷ ಅನುದಾನದಿಂದ 5 ಲಕ್ಷ ವಾಹನಕ್ಕೆ ಮೀಸಲಿಡಲಾಗಿದೆ. ಕಾಮಗಾರಿಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಇದರೊಂದಿಗೆ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು ಮಾತ್ರವಲ್ಲದೆ ಕಸಕ್ಕೆ ಮುಕ್ತಿ ಸಿಕ್ಕಿದಂತಾಗಿದೆಅವಿನಾಶ್ ಪಿಡಿಒ ಒಳಮೊಗ್ರು

ಕಾರ್ಯಕ್ರಮದಲ್ಲಿ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಹಾಯಕ ನಿರ್ದೇಶಕಿ ಶೈಲಜಾ, ಮೆಸ್ಕಾಂ ಅಧಿಕಾರಿಗಳಾದ ವಸಂತ್ , ನಿತ್ಯಾನಂದ ತೆಂಡೂಲ್ಕರ್, ಗ್ರಾಮರಕರಣಿಕ ರಾಧಾಕೃಷ್ಣ, ನರೇಗಾ ಇಂಜಿನಿಯರ್ ಇರ್ಷಾದ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ, ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ , ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ಚಂದ್ರ ರೈ ಕೈಕಾರ, ಅಬ್ದುಲ್‌ರಹಿಮಾನ್ ಅರಿಯಡ್ಕ, ಪದ್ಮನಾಭ ಪೂಜಾರಿ ಅಜ್ಜಿಕಲ್ಲು, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ, ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಶೀನಪ್ಪ ನಾಯ್ಕ್, ಪ್ರದೀಪ್ ಎಸ್, ರೇಖಾ ಬಿಜತ್ರೆ, ನಳಿನಾಕ್ಷಿ , ನಿಮಿತಾ, ಚಿತ್ರಾ ಬಿ ಸಿ, ವಿನೋದ್‌ಕುಮಾರ್ ಶೆಟ್ಟಿ ಮುಡಾಲ, ಲತೀಫ್ ಕುಂಬ್ರ, ಶಾರದಾ, ಅಶ್ರಫ್ ಯು ಕೆ, ಸಂತೋಷ್‌ಕುಮಾರ್ ರೈ ಕೈಕಾರ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ, ಕಾರ್ಯದರ್ಶಿ ಸಲಾಂ ಉಷಾ ನಾರಾಯಣ, ಸುಶ್ಮಾ ಸತೀಶ್ ಕೋಡಿಬೈಲು, ಅಂಗನವಾಡಿ ಸಹಾಯಕಿ ಆಶಾ ಕುಂಬ್ರ, ನಿವೃತ್ತ ಶಿಕ್ಷಕ ಸುಧಾಕರ ರೈ ಕುಂಬ್ರ, ರಾಜ್‌ಪ್ರಕಾಶ್ ರೈ ಕುಂಬ್ರ, ಉಪನ್ಯಾಸಕ ಪುಷ್ಪರಾಜ್ , ರಾಮಯ್ಯ ಗೌಡ ಬೊಳ್ಳಾಡಿ, ಶಿವರಾಮ ಗೌಡ ಬೊಳ್ಳಾಡಿ, ಪ್ರವೀಣ್ ಪಲ್ಲತ್ತಾರು, ಬಾಬು ಪೂಜಾರಿ ಬಡಕ್ಕೋಡಿ, ಮೋನಪ್ಪ ಪೂಜಾರಿ ಬಡಕ್ಕೋಡಿ, ಕರುಣಾ ರೈ ಬಿಜಲ , ಗುತ್ತಿಗೆದಾರರಾದ ಯುವರಾಜ್ ಶೆಟ್ಟಿ, ರಾಜೇಂದ್ರ ಕಾಣಿಯೂರ್, ನವೀನ್ ಪ್ರಸಾದ್ ಕೈಕಾರ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಒಳಮೊಗ್ರು ಗ್ರಾಪಂ ಕಾರ್ಯದರ್ಶಿ ಜಯಂತಿ, ಜಾನಕಿ, ಗುಲಾಬಿ, ಕೇಶವ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here