ಪಿ.ಎಚ್‌.ಡಿ. ವ್ಯಾಸಂಗಕ್ಕಾಗಿ ಕು. ಸಾಹಿತ್ಯ ಹುಲಿಮನೆ ಜಪಾನ್‌ಗೆ

0

 

ಜಾಲ್ಸೂರು ಗ್ರಾಮದ ಆನಂದ ಹುಲಿಮನೆ ಹಾಗೂ ಶ್ರೀಮತಿ ಪುಷ್ಪವೇಣಿ ಎ.ಎಚ್. ದಂಪತಿಯ ಪುತ್ರಿ ಕು. ಸಾಹಿತ್ಯ ಹುಲಿಮನೆ ಅವರು ಪಿ.ಎಚ್‌‌.ಡಿ. ವ್ಯಾಸಂಗದ ನಿಮಿತ್ತ ಸೆ.21ರಂದು ಜಪಾನ್‌ಗೆ ತೆರಳಿದ್ದಾರೆ.

ಜಪಾನ್‌ನ ಹೊಕ್ಕೈಡೋದಲ್ಲಿರುವ ಮುರೋರನ್ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಮಿಜುಮೊಟೊ-ಚೋ
(Muroran institution of technology
Mizumoto-cho)ಯುನಿವರ್ಸಿಟಿಯಲ್ಲಿ 3 ವರ್ಷಗಳ ಕಾಲ ಅವರು ಪಿ.ಎಚ್‌.ಡಿ. (Doctor of Philosophy ) ವ್ಯಾಸಂಗ ಮಾಡಲಿದ್ದಾರೆ.
ಇವರು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯಸಿ, ಸೈಂಟ್
ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಹಾಗೂ ಮಂಗಳೂರಿನ ಕೋಣಾಜೆ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ. ವಿದ್ಯಾಭ್ಯಾಸ ಪೂರೈಸಿದ್ದಾರೆ.

LEAVE A REPLY

Please enter your comment!
Please enter your name here