ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ನಿರ್ದೇಶಕರುಗಳ ನೇಮಕ

0

ಜಿಲ್ಲಾ ಪ್ರತಿನಿಧಿಯಾಗಿ ಪುರಂದರ ಆಯ್ಕೆ

ಸುಳ್ಯ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ನಿರ್ದೇಶಕರನ್ನು ಸೆ.24 ರಂದು ನಡೆದ ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಎಸ್. ಹಾಗೂ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಗೌಡರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
9 ನಿರ್ದೇಶಕರನ್ನು ಆಯ್ಕೆ ಮಾಡಿದ್ದು ಅವರಿಗೆ ವಿವಿಧ ಜವಾಬ್ದಾರಿ ವಹಿಸಲಾಗಿದೆ.

ಉಪಾಧ್ಯಕ್ಷರಾಗಿ ಉದಯಕುಮಾರ ರೈ, ಜೊತೆ ಕಾರ್ಯದರ್ಶಿಯಾಗಿ ವಿದ್ಯಾಶಂಕರಿ ಅಜ್ಜಾವರ ಹೈಸ್ಕೂಲ್, ಸಂಘಟನಾ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಎನ್ ಎಂ ಪಿ ಯು ಅರಂತೋಡು, ಕ್ರೀಡಾ ಕಾರ್ಯದರ್ಶಿಯಾಗಿ ಉದಯಕುಮಾರ್ ದುಗ್ಗಲಡ್ಕ ಹೈ ಸ್ಕೂಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವೀಣಾ ಕೆ. ಕೆ. ಜೂನಿಯರ್ ಕಾಲೇಜು ಸುಳ್ಯ, ಪತ್ರಿಕಾ ಪ್ರತಿನಿಧಿಯಾಗಿ ಪ್ರಕಾಶ್ ಕೆ ಕೆ. ದೊಡ್ಡತೋಟ ಹಿ.ಪ್ರಾ.ಶಾಲೆ, ಜಿಲ್ಲಾ ಪ್ರತಿನಿಧಿಯಾಗಿ ಪುರಂದರ ಪಂಜ ಹೈ ಸ್ಕೂಲ್ , ನಿರ್ದೇಶಕರಾಗಿ ಸುನಿಲ್ ಕುಮಾರ್ ಗುತ್ತಿಗಾರು ಹೈಸ್ಕೂಲ್, ತಾಲೂಕು ಪ್ರತಿನಿಧಿಯಾಗಿ ರಾಜೇಶ್ ಕೆ. ವಿ. ಜಿ.ಹೈಸ್ಕೂಲ್ ಕೊಲ್ಲಮೊಗ್ರ ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.

LEAVE A REPLY

Please enter your comment!
Please enter your name here