ಕುಂತೂರು: ಮುಡಿಪಿನಡ್ಕದಲ್ಲಿ ಮನೆಗೆ ಬೆಂಕಿ – ಶಾರ್ಟ್‌ ಸರ್ಕ್ಯೂಟ್‌ ಶಂಕೆ; ಚಿನ್ನ, ನಗದು ಬೆಂಕಿಗೆ ಆಹುತಿ

0

ಕಡಬ: ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಸಿದ್ದೀಕ್ ಎ.ಎಸ್ ರವರ ಹಂಚಿನ ಮನೆಗೆ ಬೆಂಕಿ ತಗುಲಿದ ಘಟನೆ ಫೆ.7ರಂದು ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿದೆ  ಎಂದು ಶಂಕಿಸಲಾಗಿದ್ದು, ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ರವರ ಅತ್ತಿಗೆ ಹಾಗೂ ಮಗು ಇದ್ದು ಬೆಂಕಿಯ ಹೊಗೆ ಬರುತ್ತಿರುವಂತೆ ಹೊರ ಬಂದಿದ್ದರು ಎಂದು ತಿಳಿದು ಬಂದಿದೆ. ಘಟನೆಯಿಂದಾಗಿ ಮನೆಯಲ್ಲಿದ್ದ ರಿಂದ 5 ಪವನ್ ಬಂಗಾರ, 40 ಸಾವಿರ ರೂ.ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here