ವಿಶ್ವ ಪುಂಡಿತ್ತೂರು, ಯಮುನಾ ತಿಮ್ಮಪ್ಪ ಸುವರ್ಣ ಸ್ಮರಣಾರ್ಥ ವಿಶ್ವ ಬಳಗದಿಂದ ರಾಮಕೃಷ್ಣ ಸೇವಾ ಸಮಾಜ, ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ಹಣ್ಣು ಹಂಪಲು ವಿತರಣೆ

0

 


ಪುತ್ತೂರು; ವಿಶ್ವ ಬಳಗ ಬಲ್ನಾಡು ಇದರ ವತಿಯಿಂದ, ಇತ್ತೀಚೆಗೆ ನಿಧನರಾದ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿಶ್ವ ಡಿ ಪುಂಡಿತ್ತೂರು ಹಾಗೂ ಬಲ್ನಾಡು ಗ್ರಾ.ಪಂ ಸದಸ್ಯೆ ಯಮುನಾ ತಿಮ್ಮಪ್ಪ ಸುವರ್ಣ ರವರ ಸ್ಮರಣಾರ್ಥ , ಪ್ರಜ್ಞಾ ಆಶ್ರಮ ಬೀರಮಲೆ ಮತ್ತು ನೆಲ್ಲಿಕಟ್ಟೆ ರಾಮಕೃಷ್ಣ ಸೇವಾ ಸಮಾಜದ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.

ನಗರಸಭಾ ಸದಸ್ಯರಾದ ಪೂರ್ಣಿಮಾ ಚೆನ್ನಪ್ಪ ಗೌಡ, ಪಿ.ಜಿ‌. ಜಗನ್ನಿವಾಸ ರಾವ್, ಪುತ್ತೂರು ಕೋ-ಓಪರೇಟಿವ್ ಬ್ಯಾಂಕ್ ನ ನಿರ್ದೇಶಕ ಕಿರಣ್ ಕುಮಾರ್ ರೈ, ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಬಿ.ಆರ್, ಸದಸ್ಯ ಕೃಷ್ಣಪ್ಪ ನಾಯ್ಕ, ರಾಮಚಂದ್ರ ರೈ ಬೀಡು, ತಿಮ್ಮಪ್ಪ ಸುವರ್ಣ ದೇರಾಜೆ, ಧನ್ವೀ , ನಾರಾಯಣ ನಾಯ್ಕ ಕೆರೆಮೂಲೆ, ಮಧುಕರ ಗೌಡ, ವೆಂಕಟಗಿರಿ .ಬಿ‌. ಪುಂಡಿತ್ತೂರು, ಅನುರಾಧಾ, ಪ್ರಕಾಶ್ ಕೆಲ್ಲಾಡಿ, ಭರತ್ ಚನಿಲ, ಸಂತೋಷ್ ಬೋನಂತಾಯ, ಅಶೋಕ್ ಬಲ್ನಾಡು, ಅಂಕಿತಾ ಡಿ., ಸಾಯೀಶ್ವರೀ, ಟೌನ್ ಬ್ಯಾಂಕ್ ನಿರ್ದೇಶಕರಾದ ಬಪ್ಪಳಿಗೆ ಚಂದ್ರಶೇಖರ ರಾವ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here