ಬೀದಿಗುಡ್ಡೆಯಲ್ಲಿ ಅಮೃತ ವರ್ಷಿಣಿ ನೂತನ ಗೋದಾಮು ಕಟ್ಟಡ ಉದ್ಘಾಟನೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೀದಿಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಅಮೃತವರ್ಷಿಣಿ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭವು ಅ.1 ರಂದು ನಡೆಯಿತು. ಗೋದಾಮು ಕಟ್ಟಡವನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಉದ್ಘಾಟಿಸಿದರು.

 

ಆದರ್ಶವರ್ಷಿಣಿ ಸಭಾಭವನವನ್ನು
ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ ,
ಉದ್ಘಾಟಿಸಿದರು. ದ. ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟು ಸಮಾರಂಭವನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಸಹಕಾರ ಯೂನಿಯನ್ ನ ಅಧ್ಯಕ್ಷ ರಮೇಶ್ ದೇಲಂಪಾಡಿ, ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸೂಂತಾರು ‌ಹಾಗೂ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ , ಶ್ರೀ ಕೃಷ್ಣ ಭಟ್ ಪಟೋಳಿ, ರಘುನಾಥ ರೈ
ಕೆರೆಕ್ಕೋಡಿ, ಕಿಟ್ಟಣ್ಣ ಪೂಜಾರಿ ಕಾಂಜಿ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಗಣೇಶ್ ಪೈ ಪಂಜ, ಶ್ರೀಮತಿ ಮೋಹಿನಿ ಬಿ.ಎಲ್ ಬೊಳ್ಮಲೆ, ಶ್ರೀಮತಿ ಹೇಮಲತಾ ಚಿದ್ಗಲ್, ಮುದರ ಐವತ್ತೊಕ್ಲು, ವಲಯ ಮೇಲ್ವಿಚಾರಕ ಪ್ರದೀಪ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


*ಸನ್ಮಾನ-ಗೌರವಾರ್ಪಣೆ*: ಕಟ್ಟಡದ ಗುತ್ತಿಗೆದಾರ ಶಬೀರ್ ಬಾಳಿಲ, ಇಂಜಿನಿಯರ್ ರಾಮಣ್ಣ,ಭಜಕ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ರೈ ಅರ್ಗುಡಿಯವರನ್ನು ಸನ್ಮಾನಿಸಲಾಯಿತು.ಕಟ್ಟಡದ ಜಾಗವನ್ನು ಕ್ರಯಾ ಸಾಧನ ಮಾಡಿ ನೀಡಿದ ಸೀತಾರಾಮ ರೈ ಬೇಂಗನಡ್ಕರವನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಕುಶ್ ಪ್ರಾರ್ಥಿಸಿದರು. ರಚನಾ ಚಿದ್ಗಲ್ಲು ಮತ್ತು ಸ್ತುತಿ ರೈತ ಗೀತೆ ಹಾಡಿದರು.ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ನೇರಳ ನಿರೂಪಿಸಿದರು.ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ ವರದಿ ವಾಚಿಸಿದರು.ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here