ಫೆ. 20ರಂದು ಉಪ್ಪಿನಂಗಡಿ ವಿಜಯ ವಿಕ್ರಮ‌ ಕಂಬಳದ ಕರೆ ಮುಹೂರ್ತ

0

ಪುತ್ತೂರು: ಎಪ್ರಿಲ್ 2 ಮತ್ತು 3 ರಂದು ನಡೆಯಲಿರುವ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳದ ಕರೆ ಮೂಹೂರ್ತ ಫೆ. 20ರಂದು ಬೆಳಿಗ್ಗೆ 9:30ಕ್ಕೆ ಉಪ್ಪಿನಂಗಡಿ ಕೂಟೇಲಿನ ನದಿ ಕಿನಾರೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ನಡೆಯಲಿದೆ.

ನಂತರ ಕಂಬಳ ನಡೆಸುವ ಬಗೆಗಿನ ರೂಪುರೇಷೆಯ ಕುರಿತು ಪೂರ್ವಭಾವಿ ಸಭೆ ನಡೆಯಲಿದೆ. ಕಂಬಳ ಸಮಿತಿಯ ಸದಸ್ಯರೆಲ್ಲರೂ ಕಾರ್ಯಕ್ರಮಕ್ಕೆ ಹಾಜರಾಗಿ ಸೂಕ್ತ ಸಲಹೆ ಸೂಚನೆ ನೀಡಿ ಕಂಬಳದ ಯಶಸ್ಸಿಗೆ ಸಹಕರಿಸಬೇಕು ಎಂದು
ಕಂಬಳ ಸಮಿತಿ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here