ಕಂಬಳಬೆಟ್ಟು ಜನಪ್ರೀಯ ಸೆಂಟ್ರಲ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾ ಕೂಟ

0

  • ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಯಲ್ಲೊಂದಾಗಲಿದೆ: ಡಾ. ಅಬ್ದುಲ್ ಬಶೀರ್ ವಿ.ಕೆ.
  • ಕನಸನ್ನು ನನಸು ಮಾಡುವ ಪ್ರಯತ್ನ ನಮ್ಮದಾಗಬೇಕು:  ಈಶ್ವರ ಭಟ್ ಕಾಶಿಮಠ
  • ರಾಷ್ಟ್ರೀಯ ಶಿಕ್ಷಣ ನೀತಿಯಂತೆ  ಪಾಠವನ್ನು ಹೇಳಿಕೊಡುವ ವ್ಯವಸ್ಥೆ ಇಲ್ಲಿದೆ: ಡಾ. ರವಿಕುಮಾರ್ ಎಲ್.ಪಿ.

 

ವಿಟ್ಲ:  ಒಳ್ಳೆಯ ಮನಸ್ಸಿನ ಜನರು ನಮ್ಮೊಟ್ಟಿಗಿದ್ದರೆ ಅಲ್ಲಿ ಒಗ್ಗಟ್ಟು ಇರಲು ಸಾಧ್ಯ. ಇದೊಂದು ಸಂತಸದ ಕ್ಷಣ. ಒಂದು ವರುಷದಲ್ಲಿಯೇ ಈ ಭಾಗದ ಜನರ ಉತ್ತಮ ಸಹಕಾರ ನಮಗೆ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿದ ಅಡ್ಮೀಶನ್ ಆಗ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆ ಇದಾಗಬೇಕು ಎನ್ನುವ  ದೂರ ದೃಷ್ಠಿ ನಮ್ಮಲ್ಲಿದೆ ಎಂದು ಹಾಸನದ ಜನಪ್ರೀಯ ಆಸ್ಪತ್ರೆಯ ವೈದ್ಯ, ಜನಪ್ರಿಯ ಸೆಂಟ್ರಲ್ ಸ್ಕೂಲ್‌ನ ಚೇರ್‌ಮೆನ್  ಡಾ. ಅಬ್ದುಲ್ ಬಶೀರ್ ವಿ.ಕೆ. ರವರು ಹೇಳಿದರು.


ಅವರು ಕಂಬಳಬೆಟ್ಟುವಿನಲ್ಲಿರುವ ಜನಪ್ರೀಯ ಸೆಂಟ್ರಲ್ ಸ್ಕೂಲ್ ನಲ್ಲಿ ಫೆ.19ರಂದು ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.

ಆರೋಗ್ಯಕ್ಕೆ ಸಂಬಂದಿಸಿದಂತೆ  ಸಹಕಾರ ನೀಡುವ ನಿಟ್ಟಿನಲ್ಲಿ  ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗುತ್ತಿದೆ.  ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಪ್ರಯತ್ನ‌ ನಮ್ಮದಾಗಿದೆ. ಶಾಲಾ ನೂತನ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮೂರು ತಿಂಗಳಿನ ಒಳಗೆ ಕಟ್ಟಡದ ಕೆಲಸ ಪೂರ್ಣಗೊಳ್ಳಲಿದೆ. ಅಲ್ಲಿ ಸಿಬಿಎಸ್ ಸಿ ತರಗತಿಯನ್ನು ಆರಂಭಿಸುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಪಿಯು ಕಾಲೇಜು ಆರಂಭಿಸಿ ಇದನ್ನು ರೆಸಿಡೆನ್ಸಿ ಸ್ಕೂಲ್ ಆಗಿ ಪರಿವರ್ತಿಸುವ ಇರಾದೆ ನಮ್ಮಲ್ಲಿದೆ. ಅದಕ್ಕೆ ಈ ಭಾಗದ ಜನರ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು.

 

ಶಾಲಾ ಈಜುಕೊಳವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ರಾಷ್ಟ್ರೀಯ ಈಜುಪಟು ಈಶ್ವರ ಭಟ್ ಕಾಶಿಮಠರವರು ಮಾತನಾಡಿ  ಈ ಕಾರ್ಯಕ್ರಮದಲ್ಲಿ ನಾನು ಸನ್ಮಾನಿಸಲ್ಪಟ್ಟಿರುವುದು ತುಂಬಾ ಸಂತಸವಾಗಿದೆ. ಕನಸನ್ನು ನನಸು ಮಾಡುವ ಪ್ರಯತ್ನ ನಮ್ಮದಾಗಬೇಕು. ಯಾವುದೇ ವಿಚಾರವನ್ನು ನಾವು ಪಾಸಿಟೀವ್ ಆಗಿ ತಿಂಕ್ ಮಾಡಿದಾಗ ನಮಗೆ ಒಳ್ಳೆಯದಾಗುತ್ತದೆ. ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸುವ ಗುಣ ನಮ್ಮಲ್ಲಿರಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು‌.

 

ಖ್ಯಾತ ಶಿಕ್ಷಣ ತಜ್ಞ  ಡಾ. ರವಿಕುಮಾರ್ ಎಲ್.ಪಿ.ರವರು ಮಾತನಾಡಿ ಕ್ರೀಡೆ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಪಾಟವನ್ನು ಆಟದ ಮೂಲಕ ಕಲಿಸುವ ವ್ಯವಸ್ಥೆ ನಮ್ಮ ಶಾಲೆಯಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಇಲ್ಲಿ ಪಾಠವನ್ನು ಹೇಳಿಕೊಡುವ ವ್ಯವಸ್ಥೆಯಾಗುತ್ತಿದೆ. ಹಿರಿಯರ ಗುಣವನ್ನು ಮಕ್ಕಳು ಅವಲಂಬಿಸುತ್ತಾರೆ. ನಾವು ಸರಿದಾರಿಯಲ್ಲಿ ನಡೆದರೆ ತಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಲು ಸಾಧ್ಯ. ಸಮಯಕ್ಕೆ ನಾವು ಪ್ರಥಮ ಆದ್ಯತೆ ನೀಡಬೇಕಾಗಿದೆ. ಇತರ ದೊಡ್ಡ ಪಟ್ಟಣಗಳ ವಿದ್ಯಾರ್ಥಿಗಳಿಗೆ  ಸಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.

ಈ‌ ಸಂದರ್ಭದಲ್ಲಿ ಶಾಲಾ‌ ಚಟುವಟಿಕೆಗಳ ಅನಾವರಣಕ್ಕಾಗಿ   ಜನಪ್ರೀಯ ಟಿ.ವಿ.ಚಾನಲ್ ಅನ್ನು ಬಿಡುಗಡೆ ಮಾಡಲಾಯಿತು. ಬಳಿಕ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪೋಷಕರಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಯಿತು.

ಜನಪ್ರೀಯ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಫಾತಿಮಾ ನಸ್ರಿನಾ ಬಶೀರ್, ವಿಟ್ಲ ಮುಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಶಿಕ್ಷಕ ರಕ್ಷಕ  ಸಂಘದ ಅಧ್ಯಕ್ಷ ಶಾಕೀರ್ ಅಳಕೆಮಜಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ಶೈಲಜಾ ಆರ್ ಶೆಟ್ಟಿ ಸ್ವಾಗತಿಸಿ
ಸಿಬ್ಬಂದಿ ಸಫ್ವಾನ್ ವಂದಿಸಿದರು.

LEAVE A REPLY

Please enter your comment!
Please enter your name here