ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ಸನ್ಮಾನ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಹಿರಿಯ ಗೃಹರಕ್ಷಕರಿಗೆ ಸನ್ಮಾನ ಕಾರ್ಯಕ್ರಮವು ಫೆ.20ಬೆಳ್ಳಾರೆ ಗೃಹರಕ್ಷಕದಳ ಘಟಕ ಕಛೇರಿಯಲ್ಲಿ ನಡೆಯಿತು.


29 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರಭಾಕರ್, 22 ವರ್ಷಗಳ ಕಾಲ ಸೇವೆ ಸಲ್ಲಿಸಿ ರಾಮಚಂದ್ರ, 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಾರಾಯಣ ಮಣಿಯಾಣಿಯವರ ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿ ಅಲ್ಲಿಸಿದ ಸೇವೆಯನ್ನು ಗುರುತಿಸಿ, ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಸನ್ಮಾನಿಸಿ, ಗೌರವಿಸಿದರು. ಬೆಳ್ಳಾರೆ ಘಟಕದ ಪ್ರಭಾರ ಘಟಕಧಿಕಾರಿ ವಸಂತ ಕುಮಾರ್, ಹಿರಿಯ ಗೃಹರಕ್ಷಕರಾದ ಸೀತಾರಾಮ್, ಅಣ್ಣು, ವೀರನಾಥ, ಪದ್ಮನಾಭ ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here