ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ

0

 

ಉಪ್ಪಿನಂಗಡಿ: ಸಮಾಜದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಜನಪ್ರತಿನಿಧಿಗಳ ಪ್ರಯತ್ನವನ್ನು ಉತ್ತಮ ರೀತಿಯಲ್ಲಿ ಸಾಕಾರಗೊಳಿಸಲು ನಾಗರಿಕ ಸಮಾಜದ ಸಹಕಾರ ಅತ್ಯಗತ್ಯವೆಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಅವರು ಶನಿವಾರ ರಾತ್ರಿ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣಕ್ಕೆ ೧೦ ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಕೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಉಪ್ಪಿನಂಗಡಿ ದೇವಳದ ಉತ್ಸವದ ಅಂಗವಾಗಿ ನಡೆದ ಕಟ್ಟೆಪೂಜೆಯ ಬಾಬ್ತು ಗೆಳೆಯರು ೯೪ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮದಂದೇ ಇಂಟರ್ ಲಾಕ್ ಅಳವಡಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸರಕಾರವೂ ಸಮಾಜದ ಉತ್ತಮ ಕಾರ್ಯಕ್ಕೆ ಸದಾ ಬೆಂಬಲ ನೀಡಲಿರುವುದರ ಸಂಕೇತವೆಂದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಗೆಳೆಯರು ೯೪ ರ ಅಧ್ಯಕ್ಷ ಗುಣಕರ ಅಗ್ನಾಡಿ, ಪೂರ್ವಾಧ್ಯಕ್ಷ ಲೋಕೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಕೆ. ಜಗದೀಶ್ ಶೆಟ್ಟಿ, ಚಂದ್ರಶೇಖರ್, ಶಶಿಧರ್ ಶೆಟ್ಟಿ, ಸುಧಾಕರ ಶೆಟ್ಟಿ, ಯು.ಜಿ. ರಾಧ, ಏಕವಿದ್ಯಾಧರ, ಸುಜಾತಕೃಷ್ಣ ಆಚಾರ್ಯ, ಬಿ.ಟಿ. ಸುಭಾಷ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here