ಕಾರ್ಲಾಡಿ ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಧರ್ಮನಡಾವಳಿ

0

ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಸಮೀಪದ ಕಾರ್ಲಾಡಿ ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಧರ್ಮನಡಾವಳಿ ಫೆ.19 ಮತ್ತು 20 ರಂದು ಜರಗಿತು.


ಫೆ.19 ರಂದು ಪೂರ್ವಾಹ್ನ ಶ್ರೀ ವೆಂಕಟ್ರಮಣ ದೇವರ ಹರಿಸೇವೆ ಮತ್ತು ನಾಗತಂಬಿಲ, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಅನ್ನ ಸಂತರ್ಪಣೆ ನಡೆದ ಬಳಿಕ. ಪರಿವಾರ ದೈವಗಳಾದ ಗುರುಕಾರ್ಣರು, ದೇವತೆ, ಕಲ್ಲುರ್ಟಿ ದೈವ, ಪಿಲಿಚಾಮುಂಡಿ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ ದೈವಗಳ ನೇಮೋತ್ಸವ ಜರಗಿತು.


ಫೆ.20 ರಂದು ಪೂರ್ವಾಹ್ನ ಧರ್ಮದೈವ ರುದ್ರಚಾಮುಂಡಿ ದೈವದ ಮತ್ತು ಶಿರಾಡಿ ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ, ಗುಳಿಗ ದೈವದ ನೇಮೋತ್ಸವ ನಡೆಯಿತು. ಕಾರ್ಲಾಡಿ ಕುಟುಂಬದ ಹಿರಿಯರಾದ ವೆಂಕಪ್ಪ ಗೌಡ ಕಾರ್ಲಾಡಿ, ಕಾರ್ಲಾಡಿ ಕುಟುಂಬದ ತರವಾಡು ಮನೆಯ ಕರಿಯಪ್ಪ ಗೌಡ ಕಾರ್ಲಾಡಿ, ವೆಂಕಮ್ಮ ಕಾರ್ಲಾಡಿ, ಗೋಪಣ್ಣ ಗೌಡ ಕಾರ್ಲಾಡಿ, ಲಿಂಗಪ್ಪ ಗೌಡ ಕಾರ್ಲಾಡಿ, ಶೀನಪ್ಪ ಗೌಡ ಕಾರ್ಲಾಡಿ, ಬಾಲಣ್ಣ ಗೌಡ ಕಾರ್ಲಾಡಿ, ಕುಶಾಲಪ್ಪ ಗೌಡ ಕಾರ್ಲಾಡಿ( ಅಂಕಲ್ ಸ್ವೀಟ್ಸ್ ಪುತ್ತೂರು) ಶಿವರಾಮ ಗೌಡ ಕಾರ್ಲಾಡಿರವರುಗಳು ಅತಿಥಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಂದಾಳುಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಲಾಡಿ ಕುಟುಂಬದ ಸದಸ್ಯರುಗಳು, ಊರ ಹಾಗೂ ಪರವೂರ ಹಿತೈಷಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here