ಎಬಿ‌ ಎಂಟರ್ ಪ್ರೈಸಸ್ ವತಿಯಿಂದ ಪುಣ್ಯರಬೀಹ್ ಮೌಲಿದ್ ಪಾರಾಯಣ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ

0

 

ಎಬಿ ಎಂಟರ್ ಪ್ರೈಸಸ್ ಅಡ್ಕ ಅಜ್ಜಾವರ ಇದರ ವತಿಯಿಂದ ಪ್ರತಿವರ್ಷ ಪ್ರವಾದಿ ಮಹಮ್ಮದ್ ರವರ ಜನಿಸಿದ ರಬ್ವಿಲವಲ್ ತಿಂಗಳಲ್ಲಿ ಆಚರಿಸುತ್ತಿರುವ ಮೌಲಿದ್ ಪಾರಾಯಣ ಮತ್ತು ಬುರ್ದಾ ಮಜ್ಲಿಸ್ ಕಾರ್ಯಕ್ರಮ ಅ.3 ರಂದು ಅಡ್ಕ ಜೀಲಾನಿ ಕಾಂಪೌಂಡ್ ನಲ್ಲಿ ನಡೆಯಿತು.

ಮೌಲೀದ್ ಮತ್ತು ಬುರ್ದಾ ಮಜ್ಲಿಸ್ ಕಾರ್ಯಕ್ರಮಕ್ಕೆ ಸಯ್ಯದ್ ಸುಹೈಲ್ ತಂಙಳ್ ಮಡಕ್ಕರ ನೇತ್ರತ್ವ ನೀಡಿ ದುವಾಶಿರ್ವಚನ ಮಾಡಿದರು.
ಸಯ್ಯದ್ ಕುಂಞಿಕೋಯ ತಂಙಳ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಸಯ್ಯದ್ ಹುಸೈನ್ ತಂಙಳ್ ಮೊದಲಾದವರು ಉಪಸ್ಥಿತರಿದ್ದರು.
ಪೇರೋಡ್ ಮಹಮ್ಮದ್ ಅಲ್ ಅಝ್ಹರಿ ಮುಖ್ಯ ಪ್ರಬಾಷಣ ಮಾಡಿದರು.
ಎಬಿ ಎಂಟರ್ ಪ್ರೈಸಸ್ ಅಡಳಿತ ನಿರ್ದೇಶಕ ಎಬಿ ಅಶ್ರಫ್ ಸಹದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಲವಾರು ಧಾರ್ಮಿಕ,ಸಾಮಾಜಿಕ ನಾಯಕರು ಹಾಗೂ ಹಲವಾರು ಉಸ್ತಾದರ್ ಗಳು, ಮುತ್ತಾಲ್ಲಿಮ್ ಗಳು ವೆದಿಕೆಯಲ್ಲಿ ಉಪಸ್ಥಿತರಿದ್ದರು.
ಬುರ್ದಾ ಕಾರ್ಯಕ್ರಮ ನಂತರ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here