ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ.ರವರಿಂದ ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನಕ್ಕೆ ಬೆಂಬಲ

0

ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ, ಲಂಚ-ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಜನಾಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಅಲ್ಲಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕ, ಬ್ಯಾನರ್ ಅಳವಡಿಕೆಯಾಗುತ್ತಿದೆ.ಅಭಿಯಾನದ ಭಾಗವಾಗಿ ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕವನ್ನು ಪ್ರಸ್ತುತ ದ.ಕ. ಅಪರ ಜಿಲ್ಲಾಧಿಕಾರಿಯಾಗಿರುವ ಈ ಹಿಂದೆ ಪುತ್ತೂರು ಎ.ಸಿ ಯಾಗಿ ಕಾರ್ಯನಿರ್ವಹಿಸಿದ್ದ ಕೃಷ್ಣಮೂರ್ತಿ ಹೆಚ್.ಕೆ. ಅವರಿಗೆ ಫೆ.22ರಂದು ನೀಡಲಾಯಿತು.ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಜನಾಂದೋಲನದ ರೂವಾರಿ ಡಾ.ಯು.ಪಿ.ಶಿವಾನಂದರವರಿಂದ -ಲಕ ಪಡೆದುಕೊಂಡ ಕೃಷ್ಣಮೂರ್ತಿ ಎಚ್.ಕೆ.ರವರು ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು.ಸುದ್ದಿ ಸುಳ್ಯದ ಹರೀಶ್ ಬಂಟ್ವಾಳ, ಶಿವಪ್ರಸಾದ್ ಕೇರ್ಪಳ, ಪುತ್ತೂರಿನ ಸಂತೋಷ್ ಕುಮಾರ್ ಶಾಂತಿನಗರ, ಗಣೇಶ್ ಎನ್. ಕಲ್ಲರ್ಪೆ, ಬೆಳ್ತಂಗಡಿಯ ದಾಮೋದರ ದೋಂಡೊಳೆ, ತುಕಾರಾಂ, ಸಂತೋಷ್ ಕೋಟ್ಯಾನ್, ಆದಿತ್ಯ ದೋಂಡೊಳೆ, ಮಂಗಳೂರಿನ ಭಾಸ್ಕರ್ ರೈ ಕಟ್ಟ, ಉಪಸ್ಥಿತರಿದ್ದರು.

ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ, ಸಿಬ್ಬಂದಿ ಅಧೀಕ್ಷಕ ಮಹಮ್ಮದ್ ಹುಸೇನ್, ಕಿರಿಯ ಸಹಾಯಕ ನಿರಂಜನ್

ಕೆಎಸ್‌ಆರ್‌ಟಿಸಿ ಡಿಸಿಯವರಿಗೆ ಫಲಕ: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಸಿಬ್ಬಂದಿ ಅಧೀಕ್ಷಕ ಮಹಮ್ಮದ್ ಹುಸೇನ್, ಕಿರಿಯ ಸಹಾಯಕ ನಿರಂಜನ್‌ರವರೂ ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕ ಪಡೆದುಕೊಂಡು ಸುದ್ದಿ ಜನಾಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಐಜಿಪಿ ದೇವಜ್ಯೋತಿ ರೇ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್,ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಋಷಿಕೇಶ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು -ಲಕವನ್ನು ಪಡೆದುಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here