ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ಎಂಬಿಕೆ ಕರ್ತವ್ಯಕ್ಕೆ ಅಡ್ಡಿಪಡಿಸಿ ತೇಜೋವಧೆ-ನ್ಯಾಯ ಒದಗಿಸುವಂತೆ

0

  • ಉಭಯ ತಾಲೂಕಿನ ಎಂ.ಬಿ. ಕೆ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಂದ ಇಒಗೆ ಮನವಿ

ಪುತ್ತೂರು:ಕೋಡಿಂಬಾಡಿ ಗ್ರಾ.ಪಂ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು(ಎಂಬಿಕೆ)ಯವರಿಗೆ ಸದಸ್ಯರಾದ ಜಯಪ್ರಕಾಶ್ ಬದಿನಾರು ಹಾಗೂ ಜಗನ್ನಾಥ ಶೆಟ್ಟಿಯವರು ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರನ್ನು ತೇಜೋವಧೆ ಮಾಡಿದ್ದಾರೆ. ಎಂ.ಬಿ.ಕೆಯವರಿಗೆ ಸೂಕ್ತ ನ್ಯಾಯ ಒದಗಿಸುವಂತೆ ಪುತ್ತೂರು ಹಾಗೂ ಕಡಬ ತಾಲೂಕಿನ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಫೆ.23ರಂದು ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರಿಗೆ ಮನವಿ ಮಾಡಿದರು.

ಮತ್ತೂರು ಕಡಬ ತಾಲೂಕುಗಳ ಗ್ರಾಮ ಪಂಚಾಯತ್‌ಗಳಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟಗಳು ಪ್ರಾರಂಭವಾಗಿದ್ದು ಸಹಾಯ ಸಂಘದಲ್ಲಿ ಅನುಭವ ಹೊಂದಿರುವ ಅರ್ಹ ಮಹಿಳ ಅಭ್ಯರ್ಥಿಯನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಂ.ಬಿ.ಕೆ ಹಾಗೂ ಎಲ್.ಸಿ.ಆರ್.ಪಿಯಾಗಿ ಒಕ್ಕೂಟದ ಕಾರ್ಯಕಾರಿಣಿ ಸಮಿತಿಯವರು ಆಯ್ಕೆ ಮಾಡಿರುತ್ತಾರೆ.

ಸರಕಾರದ ಅನುದಾನ ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರಕಾರವು ಒಕ್ಕೂಟಗಳಿಗೆ ಬಿಡುಗಡೆ ಮಾಡುವ ವಿವಿಧ ಯೋಜನೆ ಮತ್ತು ಅನುದಾನಗಳನ್ನು ಸರಿಯಾದ ಮಾರ್ಗಸೂಚಿಯ ಪ್ರಕಾರ ಕಾರ್ಯನಿರ್ವಹಿಸಲು ನಿಸ್ವಾರ್ಥವಾಗಿ ನಾವು ಸೇವೆಯನ್ನು ಸಲ್ಲಿಸುತ್ತಿದ್ದೇವೆ.

ಆದರೆ ಕೋಡಿಂಬಾಡಿ ಗ್ರಾ.ಪಂ ಸದಸ್ಯರಾದ ಜಯಪ್ರಕಾಶ್ ಬದಿನಾರು ಹಾಗೂ ಜಗನ್ನಾಥ ಶೆಟ್ಟಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೋಡಿಂಬಾಡಿ ಎಂಬಿಕೆಯವರ ಮೇಲೆ ಆ ಪದೇ ಪದೇ ದೂರು ನೀಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಗೌರವಧನ, ಬಡ್ಡಿ ಸಮೇತ ವಾಪಸ್ ಪಡೆಯಬೇಕು ಎಂದು ಸ್ಥಳೀಯ ರಾಜ್ಯದ ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ತೇಚೋವಧೆ ಮಾಡಿ ಮಾನಸಿಕ ಹಿಂಸೆ ನೀಡಿತ್ತಿದ್ದು, ಅವರಿಗೆ ಸೂಕ್ತವಾದ ನ್ಯಾಯವನ್ನು ಒದಗಿಸಿ ಕೊಟ್ಟು ತಾಲೂಕಿನ ಎಲ್ಲಾ ಎಂಬಿಕೆ ಹಾಘೂ ಎಲ್‌ಸಿಆರ್‌ಪಿಯವರು, ಸ್ವಸಹಾಯ ಸಂಘದ ಮಹಿಳೆಯರ / ಗ್ರಾಮದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲು ಮುಕ್ತ ಅವಕಾಶ ಕಲ್ಪಿಸಕೊಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.

ಮನವಿಯ ಪ್ರತಿಯನ್ನು ರಾಜ್ಯ ಸರಕಾರದ ಸಂಜೀವಿನಕೆಎಸ್‌ಆರ್‌ಎಲ್‌ಪಿಎಸ್‌ನ ಅಪರ ಅಭಿಯಾನ ನಿರ್ದೇಶಕ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಪುತ್ತೂರು ಹಾಗೂ ಕಡಬ ತಾಲೂಕಿನ ಎಂಬಿಕೆ ಹಾಗೂ ಎಲ್‌ಸಿಆರ್‌ಪಿಗಳು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here