ಅ. 9 : ಪೆರಾಜೆಯಲ್ಲಿ ರೈತ ಸಮಾವೇಶ ಮತ್ತು ಅಡಿಕೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿ ವಿತರಣೆ ಹಾಗೂ ಸಂವಾದ ಕಾರ್ಯಕ್ರಮ

0

 

ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ, ಮಡಿಕೇರಿ, ಕೊಡಗು
ಇದರ ವತಿಯಿಂದ ಅ. 09 ರಂದು ಬೆ. 10 ಗಂಟೆಗೆ ಪೆರಾಜೆ ರೈತ ಸಂಘದ ಆಶ್ರಯದಲ್ಲಿ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ರೈತ ಸಮಾವೇಶ ಮತ್ತು ಅಡಿಕೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿ ವಿತರಣೆ ಹಾಗೂ ಸಂವಾದ ಕಾರ್ಯಕ್ರಮವು ನಡೆಯಲಿರುವುದು.

ರೈತ ಸಂಘ ಪೆರಾಜೆ ಗ್ರಾಮ ಘಟಕದ ಅಧ್ಯಕ್ಷ ಎನ್.ಪಿ. ಬಾಲಕೃಷ್ಣ ನಿಡ್ಯಮಲೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅಡಿಕೆ ಹಳದಿ ಎಲೆ ರೋಗ ಮತ್ತು ಪೋಷಣಾಂಶ ನಿರ್ವಹಣೆ ವಿಷಯದ ಬಗ್ಗೆ ವಿಟ್ಲ ಸಿ.ಪಿ.ಸಿ.ಆರ್.ಐ.ನ ಡಾ| ಭವಿಷ್ಯರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ರೈತ ಸಂಘ ಗ್ರಾಮ ಘಟಕ ಪೆರಾಜೆ ಗೌರವಾಧ್ಯಕ್ಷ ಹರೀಶ್ಚಂದ್ರ ಮುಡ್ಕಜೆ , ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದ ಮಾಲಕ ರಮೇಶ ಶೆಟ್ಟಿ ಪೆರಾಜೆ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here